ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ  ಪ್ರಥಮ ಎಂ.ಕಾಂ  ವಿದ್ಯಾರ್ಥಿನಿಯರಿಗೆ ಅಭಿವಿನ್ಯಾಸ ಕಾರ್ಯಕ್ರಮ

ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಮತ್ತು ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಎಂ.ಕಾಂ  ವಿದ್ಯಾರ್ಥಿನಿಯರಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಡಾ.ಭಾಸ್ಕರ್ ಶೆಟ್ಟಿ ಎಸ್, ಪ್ರಾಂಶುಪಾಲರು ಉದ್ಘಾಟಿಸಿ, ಸಂಸ್ಥೆಯು ಕೋವಿಡ್ -19 ಕಾಲಘಟ್ಟದಲ್ಲಿ ಉಪನ್ಯಾಸಕ ವೃಂದ offline &amp: online ತರಗತಿಗಳನ್ನು ನಡೆಸುತ್ತಿದ್ದು.
ಸಂಸ್ಥೆಯು ಹೊಂದಿರುವ ಎಲ್ಲಾ ಲಭ್ಯಗಳನ್ನು ಸದುಪಯೋಗಿಸಿ ಕೊಂಡು ಸ್ನಾತಕೋತ್ತರ ವಿದ್ಯಾರ್ಥಿನೀಯರಾದ ತಾವುಗಳು ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಸ್ಥೆಯ ಹಿರಿಮೆ ಯನ್ನು ಹೆಚ್ಚಿಸಿ, ವೈಯಕ್ತಕ ಹಾಗೂ ಹೆತ್ತವರಿಗೆ ಘನತೆಯನ್ನು ತರುವಲ್ಲಿ ಶ್ರಮಿಸಬೇಕೆಂದು ಶುಭ ಹಾರೈಸಿದರು. 
ಶ್ರೀಮತಿ ಗೌರಿ ಎಸ್ ಭಟ್ ಮುಖ್ಯಸ್ಥರು, ವಾಣಿಜ್ಯ ಮತ್ತು ನಿರ್ವಾಹಣ ಶಾಸ್ತ್ರ ವಿಭಾಗ ಇವರು ವಿಭಾಗದ ಸ್ಥೂಲ ಪರಿಚಯವನ್ನು ನೀಡಿ, ಶುಭ ಕೋರಿದರು. ಡಾ. ಶ್ರೀಧರ್ ಪ್ರಸಾದ್ ಕೆ ಮುಖ್ಯಸ್ಥರು ರಸಾಯನ  ಶಾಸ್ತ್ರ ಮತ್ತು ಸಂಚಾಲಕರು ಸ್ನಾತಕೋತ್ತರ ವಿಭಾಗ ಇವರು ವಿದ್ಯಾರ್ಥಿನಿಯರನ್ನು ದ್ದೇಶಿಸಿ ಹಿತನುಡಿಗಳನ್ನಾಡುವುದರೊಂದಿಗೆ ವಿದ್ಯಾರ್ಥಿನಿಯರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಉತ್ತಮ ಭವಿಷ್ಯ ವನ್ನು ರೂಪಿಸಿಕೊಳ್ಳಬೇಕೆಂದು ಶುಭ ಹಾರೈಸಿದರು.
ಶ್ರೀ. ಸೋಜನ್ ಕೆ.ಜಿ, ಸಂಚಾಲಕರು ಐಕ್ಯೂಎಸಿ ಇವರು  ಸಂಸ್ಥೆ ಹಾಗೂ ಸಂಸ್ಥೆಯು ಬೆಳೆದುಬಂದ ಹೆಜ್ಜೆ ಗುರುತುಗಳನ್ನು ತಿಳಿಸಿ ವಿದ್ಯಾರ್ಥಿನಿಯರು ಶೈಕ್ಷಣಿಕ ಅಧ್ಯಯನದ ಜೊತೆಗೆ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಜ್ಞಾನಾರ್ಜನೆಯನ್ನು ಗಳಿಸಿಕೊಳ್ಳಬೇಕೆಂದು ಹಿತನುಡಿದರು. ಶ್ರೀ. ರಾಮರಾಯ ಆಚಾರ್ಯ ಮುಖ್ಯಸ್ಥರು ಅರ್ಥ ಶಾಸ್ತ್ರ ವಿಭಾಗ ಇವರು ವಿವಿಧ ವಿದ್ಯಾರ್ಥಿವೇತನಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಮನವರಿಗೆ ಮಾಡುತ್ತಾ, ತಾವುಗಳು ವಿವಿಧ ವಿದ್ಯಾರ್ಥಿಯನ್ನು ಪಡೆಯಲು ಆಸಕ್ತಿ ವಹಿಸಬೇಕೆಂದು ತಿಳಿಸಿ ಶುಭ ಕೋರಿದರು. 
ವಿದ್ಯಾರ್ಥಿನಿ ಕು. ದೀಕ್ಷಾ ಬಲ್ಲಾಳ್ ಪ್ರಥಮ ಎಂ.ಕಾಂ  ‘ಎ’ ವಿಭಾಗ ಪ್ರಾರ್ಥಿಸಿ, ವಿದ್ಯಾರ್ಥಿನಿ ಕ್ಷೇಮ ಪಾಲಾನಾಧಿಕಾರಿ ಮತ್ತು ಎಂ. ಕಾಂ  ವಿಭಾಗದ ಸಂಚಾಲಕರಾದ ಡಾ. ಗಣೇಶಪ್ಪ ಕೆ ಸ್ವಾಗತಿಸಿದರು. ತರಗತಿ ಪ್ರತಿನಿಧಿ ಕು. ಅನುಷಾ ಪ್ರಥಮ ಎಂ.ಕಾಂ ‘ಎ’ ವಂದಿಸಿದರು. ಡಾ. ಉಮೇಶ್ ಮಯ್ಯ ಐಕ್ಯೂಎಸಿ ಸಹ ಸಂಚಾಲಕರು ಮತ್ತು ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
 
 
 
 
 
 
 
 
 
 
 

Leave a Reply