Janardhan Kodavoor/ Team KaravaliXpress
32.6 C
Udupi
Tuesday, May 24, 2022
Sathyanatha Stores Brahmavara

ಪರೀಕ್ಷೆ ಬಂತು.. ವಿದ್ಯಾರ್ಥಿಗಳೇ ಪರೀಕ್ಷೆ ತಯಾರಿ ಸರಿಯಾಗಿರಲಿ.

ಮಕ್ಕಳು ಶಾಲೆಯಲ್ಲಿ ಅಥವಾ ಕಾಲೇಜ್ ನಲ್ಲಿ ಪಾಠ ಓದಿದನ್ನು 3 ಗಂಟೆಯಲ್ಲಿ ಬರೆಯುವ ಕಾಲ ಬಂದಿದೆ ಮಕ್ಕಳು ಪರೀಕ್ಷೆ ಎಂಬ ಉದ್ವೇಗದಿಂದ ಹೊರ ಬರಲು ಪ್ರಯತ್ನಿಸಬೇಕಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ, 27 ರಿಂದ ಪ್ರಾರಂಭ.  ಇನ್ನು ಉಳಿದ ಕೆಲವು ದಿನಗಳಲ್ಲಿ ಮಕ್ಕಳು ಸರಿಯಾದ ಅಭ್ಯಾಸ ಮಾಡಿದರೆ ಯಶಸ್ಸು ಸಾದ್ಯ. ಅದಕ್ಕೆ ಕೆಲವು ಸೂತ್ರಗಳನ್ನು ಅನುಸರಿಸಬಹುದಾಗಿದೆ.

ಉಳಿದ ದಿನಗಳ ಕುರಿತು ಲೆಕ್ಕ ಹಾಕಿ:- ಮಕ್ಕಳೆ ಪರೀಕ್ಷೆಗೆ ಉಳಿದ ದಿಗಳ ಕುರಿತು ಲೆಕ್ಕ ಹಾಕಿ.  ಉದಾ: 25 ದಿಗ ಉಳಿದರೆ ನಿಮಗಿರುವ 6-8ವಿಷಯಗಳನ್ನು ಗುರುತಿಸಿಕೊಳ್ಳಿ. ಅವುಗಳಲ್ಲಿ ಸುಲಭವಾದ ವಿಷಯಗಳಿಗೆ ಕಡಿಮೆ ದಿನಗಳನ್ನು ಕಷ್ಟಕರವಾದ ವಿಷಯಗಳಿಗೆ ಹೆಚ್ಚು ದಿನಗಳನ್ನು ಹೊಂದಿಸಿಕೊಳ್ಳಿ. ಈ ಸಮಯವನ್ನು ಹೊಂದಾಣಿಕೆ ಮಾಡುವಾಗಕೊನೆಯ 2ದಿನಗಳನ್ನು  ಬಿಡಿ.  ಎಕೆಂದರೆ ಆ ದಿನಗಳಲ್ಲಿ ನಿಮ್ಮ ಮನಸ್ಸು ಪ್ರೆಶ್ ಆಗಬೇಕು ಅದಕ್ಕಾಗಿ. ಸುಲಭವಾದ ವಿಷಯಗಳು ಪ್ರತಿಯೊಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ಕೆಲವರಿಗೆಗಣಿತ ಸುಲಭವಾದರೆ ಮತ್ತೆ ಕೆಲವರಿಗೆ ಅದು ಕಬ್ಬಿಣದ ಕಡಲೆಯಾಗಿರುತ್ತದೆ.

ಕಷ್ಟವಾದ ವಿಷಯಗಳಿಗೆ ಹೆಚ್ಚಿನಆದ್ಯತೆ ನೀಡಿಅದರ ಬಗ್ಗೆ ಗಮನ ಹರಿಸಿ:- ಕಷ್ಟವಾದ ವಿಷಯಗಳನ್ನು ಮೊದಲು ಕೈಗಿತ್ತಿಕೊಳ್ಲಿ. ಗಣಿತದ ಸೂತ್ರ ಬಿಡಿಸಲು, ಇಂಗ್ಲೀಷ್ ಬರೆಯಲು ಕಷ್ಟವಾಗುತ್ತೆ ಎಂದರೆ ಮೊದಲು ಆ ವಿಷಯಗಳ ಪಠ್ಯಪುಸ್ತಕ, ನೋಟ್ಸ್ ಮಾಡಿಕೊಂಡು ಓದಲು ಪ್ರಾರಂಭಿಸಿ. ಕಡಿಮೆ ಸಮಯ ಇದೆ ಎಂದು ಅವಸರದಿ೦ದ ಓದದೆ ವಿಷಯವನ್ನು ಅರ್ಥ ಮಾಡಿಕೊಂಡು ಓದಿದರೆ ಉತ್ತಮ. 

ಆದಷ್ಟು ಬರೆದು ಓದಿದರೆ ನೆನಪು ಉತ್ತಮವಾಗಿ ಉಳಿಯುತ್ತದೆ. ಇಂಗ್ಗೀಷ್ ಸ್ಪೆಲ್ಲಿಂಗ್ ನ್ನು ಬರೆಯಿರಿ ಮತ್ತು ಅದನ್ನು ಮನನ ಮಾಡಿರಿ ಇದರಿಂದತ ರಗತಿಯಲ್ಲಿ ಶಿಕ್ಷಕರು ಹೇಳಿದ ಮಾತು ಮತ್ತು ನೀವು ಓದಿದ ವಿಷಯ ಪೂರಕವಾಗಿ ನೆನಪು ಉಳಿಯುತ್ತದೆ. ನಿಮಗೆ ಬೇಕಾದಲ್ಲಿ ನಿಮ್ಮ ಹಿರಿಯರನ್ನು ಕೀಳಿರಿ ಅವರು ನಿಮಗೆ ಸಹಾಯ ಮಾಡುತ್ತಾರೆ. ಕೀರಿಮೆ ಬೇಡ. ಓದಿದ ವಿಷಯಅರ್ಥವಾಗದಿದ್ದರೆ ಆ ವಿಷಯದಕುರಿತು ಬೇರೆಯವರೊಂದಿಗೆ ಕೇಳಿ ಸರಿಯಾಗಿ ಅರ್ಥಮಾಡಿದ ಬಳಿಕವೇ ಮುಂದೆ ಓದಿ.  ಇಲ್ಲವಾದರೆ ಅದು ಸ್ಪಷ್ಟವಾಗಿ ಅರ್ಥವಾಗದಿದ್ದರೆ ಅದೇ ತಲೆಯಲ್ಲಿ ಉಳಿಯುತ್ತದೆ.

ಕೆಲವು ವಿದ್ಯಾರ್ಥಿಗಳಲ್ಲಿ ನಾನಿಗಲೇ 1-2 ಬಾರಿ ರಿವಿಜನ್ ಮಾಡಿದ್ದೇನೆ. ಪರೀಕ್ಷೆಯ ಹಿಂದಿನ ದಿನ ಓದಿದರಾಯಿತು ಎಂದು ಉದಾಸಿನ ಮಾಡಿಕೊಂಡು ಬಿಡಬೇಡಿ ಅತಿಯಾದ ಆತ್ಮವಿಶ್ವಾಸ ಕೂಡ ಉತ್ತವಾದದಲ್ಲ. ಮೊದಲು ಓದಿರುವಾಗ ಕೆಲವು ವಿಷಯಗಳನ್ನು ನೀವು ಬಿಟ್ಟಿರಬಹುದು. ಅದನ್ನು ಮತ್ತೊಮ್ಮೆ ಓದಿ, ಮುಂದುವರೆಯಿರಿ. ಈ ಸಮಯ ಅತ್ಯಂತ ಮಹತ್ವದ್ದು. ಕೊನೆಗಳಿಗೆಯಲ್ಲಿ ಸಾದ್ಯವಾಗದೆ ಬೇಸರಮಾಡಿಕೊಂಡು ಇರಬೇಡಿ.

ಪರೀಕ್ಷಾ ಪಟ್ಟಿಯಲ್ಲಿ ವಿಷಯಗಳ ನಡುವೆ ಮದ್ಯೆ ಬಿಡುವು ಇರುತ್ತದೆ. ಒಂದು ವಿಷಯ ಮುಗಿದಕೂಡಲೇ 2-3 ದಿನ ರಜೆಯಿರುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ. ಪರಿಕ್ಷೆಯ ವೇಳಾ ಪಟ್ಟಿಯನ್ನು ನೀವು ಮಲಗುವ ಕೋಣೆಯಲ್ಲಿ ದೊಡ್ಡದಾಗಿ ಬರೆದು ತೂಗು ಹಾಕಿ. ಮತ್ತುಅದಕ್ಕೆ ಸರಿಯಾಗಿ ಓದಿರಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ದಿನ ಬೇರೆ ವಿಷಯವನ್ನು ಓದಿ ಬರುವುದು ಅಥವಾ ರಜೆಯ ದಿನ ಪರೀಕ್ಷೆ ಇದೆಎಂದು ತಿಳಿದು ಶಾಲೆಗೆ ಬರುವುದು. ಈರೀತಿಯತಪ್ಪಿನಿಂದoದರೆಯಾಗ ಬಹುದು ಹೀಗಾಗಿ ಈ ಬಗ್ಗೆ ಗಮನ ವಿರಲಿ.

ಓದುವ ಸಮಯ ನಿಗದಿಪಡಿಸಿಕೊಳ್ಳಿ:- ಓದಿಗೆ ಕುಳಿತುಕೊಳ್ಳುವ ಸಮಯ ಮತ್ತು ಸ್ಥಳ ಅತ್ಯಂತ ಪ್ರಾಮುಖ್ಯವಾದದು. ಎಕೆಂದರೆ ಇದು ಕೂಡ ಓದಿನಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಬೆಳಿಗ್ಗೆ ಬೇಗನೆ ಎದ್ದು ಮುಖ ತೊಳೆದು ಓದಿದರೆ ಉತ್ತಮ.  ಆಗ ವಾತಾವರಣ ಶುಬ್ರವಾಗಿದ್ದು ಯಾವುದೇ ರೀತಿಯ ಗಲಾಟೆಗಳು ಇರುದಿಲ್ಲ. ನಿದ್ದೆಗಟಟ್ಟು ಓದಬೇಡಿ. ಇದು ಆರೋಗ್ಯದ ಕಾರಣ ಉತ್ತಮವಲ್ಲ. ಸಂಜೆಯ ವೇಳೆಯು ಕೂಡ ಓದಲುಉತ್ತಮವಾದ ಸಮಯವಾಗಿದೆ. ನಿಮ್ಮ ಮನೆಯ ಪಕ್ಕದಲ್ಲಿ ಮರಗಳು ಇದ್ದರೆ ಅದರ ಹತ್ತಿರ ಹೋಗಿ ಓದಿದರೆ ಉತ್ತಮ . ಅಲ್ಲಿ ಗಾಳಿ ಮತ್ತು ಉತ್ತಮ ವಾತಾವರಣ ಇರುತ್ತದೆ.

ಶುದ್ದ ನೀರು ಹೆಚ್ಚು ಕುಡಿಯಿರಿ:- ಈಗಾಗಲೇ ಸೆಕೆಯಿರುದರಿಂದ ಅoಗಡಿಯಲ್ಲಿ ಸಿಗುವ ಪಾನೀಯಗಳನ್ನು ಕುಡಿಯದೆ ಶುದ್ದವಾದ ನೀರು ಆದಷ್ಟು ಹೆಚ್ಚು ಕುಡಿಯಿರಿ.  ಇದು ಆರೋಗ್ಯಕ್ಕೆ ಉತ್ತಮ ಅಲ್ಲದೆ ಏಕಾಗ್ರತೆಯ ದೃಷ್ಟಿಯಿಂದಲೂ ಉತ್ತಮವಾಗಿದೆ. ಕರಿದ ತಿಂಡಿಗಳ ಬಗ್ಗೆ ಜಾಗರೂಕತೆ ವಹಿಸಿ ನಿಮ್ಮ ಆರೋಗ್ಯ ಉತ್ತಮ ವಾಗಿದ್ದರೆ ಮಾತ್ರ ನೀವು ಉತ್ತಮವಾಗೆ ಪರೀಕ್ಷೆಯಲ್ಲಿ ಬರೆದು ಉತ್ತಮ ಅಂಕ ಗಳಿಸಬುದು. ನಿಮ್ಮ ಪರಿಸರವನ್ನು ಶುದ್ದವಾಗಿರಿಸಿ ಇದುಆರೋಗ್ಯದಕಾರಣದಿಂದಅಗತ್ಯವಾಗಿದೆ.

ಓದಿನ ನಡುವೆ ಮದ್ಯೆಯಲ್ಲಿ ಬಿಡುವು ಇರಲಿ:- ನಿರಂತರವಾಗಿ ಓದುತ್ತಾ ಇರದೆ ಮದ್ಯೆಯಲ್ಲಿ ಸ್ವಲ್ಪ ಬಿಡುವು ಮಾಡು ಏಕಾಗ್ರತೆಯ ಆಟವನ್ನು ಆಡಿರಿ ಇದರಿಂದ ಉತ್ತಮವಾದ ನೆನಪು ಉಳಿಯಲು ಸಾದ್ಯ. ಗಟ್ಟಿಯಾಗಿ ಓದುದರಿಂದ ನೆನಪು ಉಳಿಯುದರಿಂದ ಆದಷ್ಟು ಗಟ್ಟಿಯಾಗಿ ಓದಿ. ಅವಸರದಿಂದ ಓದದೆ ಅರ್ಥಮಾಡಿಕೊoಡು ಓದಿ. ಪರೀಕ್ಷೆಗೆ ಕಡಿಮೆ ದಿನವಿರುದರಿಂದ ಈ ಸಮಯವನ್ನು ಸದುಪಯೋಗಿ ಪಡಿಸಿರಿ. ಮಗ್ಗಿಯನ್ನು ಹೇಳುವಾಗಲೂ ನಿಮಗೆ ಕೇಳುವಷ್ಟು ಸ್ವರದಲ್ಲಿ ಓದಿ. ಅತೀಯಾದ ಗಟ್ಟಿ ಸ್ವರ ಬೇಡ. ಗಣಿತದ ಸೂತ್ರ ವನ್ನುಅರ್ಥಮಾಡಿಕೊಂಡು ನೆನಪು ಮಾಡಿ.
 

ಟಿ.ವಿ ಮೋಬೈಲ್‌ಗೆ, ಕಂಪ್ಯೂಟರ್ ಗೆ ವಿರಾಮ ನೀಡಿ:- ಮನಸ್ಸು ಚಂಚಲವಾಗಿರುವ ಟಿ.ವಿ ಕಾರ್ಯಕ್ರಮಗಳು, ಮೋಬೈಲ್ ಆಟ ಕಂಪ್ಯೂಟರ್ ಇತ್ಯಾದಿಗಳನ್ನು ಈ ದಿನಗಳಲ್ಲಿ ಮಾಡಬೇಡಿ. ಅವನ್ನೆಲ್ಲಾ ಪರೀಕ್ಷೆ ಮುಗಿದ ಬಳಿಕವಷ್ಟೆ ಗಮನ ನೀಡಿ ಅದರ ಬದಲು ಓದಿನ ಮದ್ಯದಲ್ಲಿ ಏಕಾತಾನತೆ ಸಡಿಲಗೊಳಿಸಲು ಶಾಂತ ಪರಿಸರದಲ್ಲಿ ವಾಕ್ ಮಾಡಿ. ಮನೆಯಲ್ಲಿ ಜೋಕಾಲಿ ಇದ್ದರೆ ಅದರಲ್ಲಿ ಸ್ವಲ್ಪ ಕುಳಿತುಕೊಳ್ಳಿ. ಸಮಯವಿದ್ದರೆ ಹಿಂದಿನ ಪ್ರಶ್ನೆ ಪತ್ರಿಕೆಗೆ ಉತ್ತರಿಸಿ ಇದರಿಂದ ನಿಮಗೆ ಆತ್ಮವಿಶ್ವಾಸ ಅಲ್ಲದೆ ಸಮಯದ ಹೊಂದಾಣಿಕೆಗೆ ಉತ್ತಮ. ಪರೀಕ್ಷಯೆಯಲ್ಲಿ ಬರಹ ಮತ್ತುಕಾಗುಣಿತ, ಪೂರ್ಣ ವಿರಾಮ ಅಲ್ಪ ವಿರಾಮದ ಬಗ್ಗೆ ಗಮನಹರಿಸಿ.

ಕಂಬೈಡ್ ಸ್ಟಡಿ ಇರಲಿ ಆದರೆ ಅವರೊಂದಿಗೆ ಸ್ಪರ್ದೇಯಲ್ಲಿ ಬಿಳಬೇಡಿ: ಪಠ್ಯಪುಸ್ತಕ, ನೋಟ್ಸ್, ಗುರುಗಳು ಹೇಳಿದ ಪಾಠ ನಿಮಗೆ ಆಸ್ತಿ ಅದರ ಬದಲು ಮಾರುಕಟೆಯಲ್ಲಿರುವ ಗೈಡ್ ಬಗ್ಗೆ ಗಮನ ನೀಡಬೇಡಿ. ಮನೆಯ ಪಕ್ಕದಲ್ಲಿ ನಮ್ಮ ಕ್ಯಾಸ ಮೇಟ್‌ಇದ್ದರೆ ಅವರೊಂದಿಗೆ ಒಟ್ಟಾಗಿ ಸ್ಟಡಿ ಮಾಡಿ. ಆದರೆ ಸ್ಪರ್ದೇ ಬೇಡ. ಪ್ರತಿಯೊಬ್ಬರಿಗೆ ಅವರದೆ ಆದ ಸಾಮರ್ಥ ಇರುತ್ತದೆ. ಆದಷ್ಟು ಬರೆದುಕೊಂಡು ಓದಿ.

ಓದಿನಲ್ಲಿ ನೀರಾಳತೆ ಇರಲಿ: ಸಮಯವನ್ನು ವಿಷಯಕ್ಕೆ ತಕ್ಕಂತೆ ಮೀಸಲಿಟ್ಟು ಓದಿ. ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ಸಿಕ್ಕಿದ ಕೂಡಲೇ ಬರೆಗದೆ ಅದನ್ನು ಒಂದು ಬಾರಿ ಓದಿ ನಂತರ ಉತ್ತರಿಸಿ. ಪ್ರಶ್ನೆಗೆ ಉತ್ತರಿಸುವಾಗ ಸಮಯದ ಬಗ್ಗೆ ಗಮನ ಇರಲಿ ಗೊತ್ತಿರುವ ಉತ್ತರವನ್ನು ಸ್ಪಷ್ಟವಾಗಿ ಬರೆಯಿರಿ. ಮುಗಿಸಿದಾಗ ಓದಿ ತಪ್ಪಾದ ಉತ್ತರವನ್ನು ಸರಿ ಮಾಡಿ ಬರೆದು ನೀಡಿ. ಆರಾಮವಾಗಿ ಉತ್ತರಿಸಿ ಉದ್ವೇಗ ಬೇಡ.

ನಿಮ್ಮ ಪರೀಕ್ಷೆಗಳು ಚೆನ್ನಾಗಿರಲಿ ನಿಮಗೆ ಶುಭವಾಗಲಿ

ರಾಘವೇಂದ್ರ ಪ್ರಭು, ಕರ್ವಾಲು
ದೂ-೯೮೮೦೮೧೧೦೩೬

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!