ಅಮಾಸೆಬೈಲಿನ ಡ್ಯುಯಲ್ ಸ್ಟಾರ್ ಶಾಲಾ ವೆಬ್ ಸೈಟ್ ಉದ್ಘಾಟನೆ

 ಶಾಲೆಯ ಬೆಳವಣಿಗೆಯ ಸುಂದರ ಕ್ಷಣ ಸವಿಯಲು ವೆಬ್ ಸೈಟ್ ಅತ್ಯಂತ ಪ್ರಯೋಜನಕಾರಿ ಅದು ಎಲ್ಲಾ ಜನರಿಗೆ ಕ್ಷಣ ಮಾತ್ರದಲ್ಲಿ ತಲುಪಿಸಲು ಸುಗಮ ದಾರಿ ಇದಾಗಿದೆ ಎಂದು ಮಣಿಪಾಲ ಕ್ಯಾರಿಯರ್ ಅಕಾಡೆಮಿ ಮಣಿಪಾಲದ ಪ್ರಾಂಶುಪಾಲ ಯಶವಂತ ಕುಮಾರ್ ಹೇಳಿದರು.

ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ಶಾಲಾ ವೆಬ್ ಸೈಟ್ ಉದ್ಘಾಟನೆ ಮಾಡಿ ಇದು ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಇತರರಿಗೆ ತಿಳಿಸಲು ಸುಲಭ ಮತ್ತು ಉತ್ತಮ ಮಾರ್ಗವಾಗಿದೆ, ಶಾಲೆಯ ಎಲ್ಲಾ ಚಟುವಟಿಕೆಗಳನ್ನು ಇದರಲ್ಲಿ ನೋಡಬಹುದು ಎಂದರು.

 ಶಾಲೆಯ ಉಪಾಧ್ಯಕ್ಷ ಸಚ್ಚಿದಾನಂದ ಅಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್‌ ಆಚಾರ್ಯ, ಶಾಲಾ ಸಂಚಾಲಕ ಶಶಿಧರ ದೇವಾಡಿಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ರಾಧಿಕರವರು ಸ್ವಾಗತಿಸಿ, ಶಿಕ್ಷಕಿ ರಕ್ಷಾ ಅಡಿಗ ಪ್ರಾರ್ಥಿಸಿದರು. ಶಿಕ್ಷಕಿ ಸ್ವಾತಿ ವಂದಿಸಿ, ಶಿಕ್ಷಕ ವಿಘ್ನೇಶ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply