ನಿಗದಿ ಪಡಿಸಿರುವ 120  ದಿನಗಳಲ್ಲಿ ನಿರ್ಭೀತಿಯಿಂದ ಕಲಿಕೆಯನ್ನು ಮುಂದುವರಿಸಿ ~  ಉಡುಪಿ ಡಿಡಿಪಿಐ ಎನ್ ಎಚ್ ನಾಗೂರು 

ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರೋಗ್ಯ ಸುರಕ್ಷತಾ ಕೇಂದ್ರಗಳಾಗಿದ್ದು ಮಕ್ಕಳು ನಿಗಧಿ ಪಡಿಸಿರುವ 120  ದಿನಗಳಲ್ಲಿ ನಿರ್ಭೀತಿಯಿಂದ ಕಲಿಕೆಯನ್ನು ಮುಂದುವರಿಸುವಂತೆ ಉಡುಪಿ ಡಿಡಿಪಿಐ ಎನ್ ಎಚ್ ನಾಗೂರು ತಿಳಿಸಿದ್ದಾರೆ.

ಅವರು ಉಡುಪಿ ಬಾಲಕಿಯರ ಪ ಪೂ ಕಾಲೇಜಿನ ಪ್ರೌಢಶಾಲಾ ಆರೋಗ್ಯ ಕ್ಲಬ್ ಆಶ್ರಯದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮಾತನಾಡಿ ನಮಗೆಲ್ಲಾ ಪ್ರಕೃತಿಯು ಜೀವ ಹಾಗೂ ಜೀವನದ ಕುರಿತು ಸರಿಯಾದ ಪಾಠ ಕಲಿಸಿದೆ. ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವುದಲ್ಲದೆ ಜೀವನಶೈಲಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಬೇಕಾದ ಅನಿವಾರ್ಯತೆ ಇದೆ.

ಬಂದಿರುವ ಸಂಕಷ್ಟಗಳನ್ನು ಹೋಗಲಾಡಿಸುವ ಶಕ್ತಿ ನಮ್ಮಲ್ಲಿದೆ.ಅದನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಿ ಕೊಂಡು ಸಮಾಜದಲ್ಲಿ ಸತ್ಪ್ರಜೆಯಾಗಿ ಬದುಕೋಣ ಎಂದರು.ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರವಿ.ಕೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಸ್ವಾಗತಿಸಿದರು. ಸಹ ಶಿಕ್ಷಕ ರಾಮಚಂದ್ರ ಭಟ್ ವಂದಿಸಿದರು.

 
 
 
 
 
 
 
 
 
 
 

Leave a Reply