ಪ್ರಜಾಪ್ರಭುತ್ವ ಬಲಪಡಿಸುವ ಕಾರ್ಯ ಬಾಲ್ಯದಿಂದಲೇ ಆಗಬೇಕಾಗಿದೆ.~ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ 

ಉಡುಪಿ ಬಾಲಕಿಯರ ಸರಕಾರಿ ಪ​.​ಪೂ ಕಾಲೇಜಿನ ಈ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವಿಶೇಷ ಸಾಧನೆ ಮಾಡಿದ ಉಪನ್ಯಾಸಕರನ್ನು ಸನ್ಮಾನಿಸುವ ಕಾರ್ಯ ಕ್ರಮವು ಸಂಸ್ಥೆಯ ಸಭಾ ಭವನದಲ್ಲಿ ಜರುಗಿತು.
 
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ತಹಶೀಲ್ದಾರ್ ಶ್ರೀ ಪ್ರದೀಪ್ ಕುರ್ಡೇಕರ್ ಮಾತನಾಡಿ ಪ್ರಜಾಪ್ರಭುತ್ವ ಬಲಪಡಿಸುವ ಕಾರ್ಯ ಬಾಲ್ಯದಿಂದಲೇ ಆಗಬೇಕಾಗಿದೆ.​ ​ಶಾಲಾ ಕಾಲೇಜಿನಲ್ಲಿ ಚುನಾಯಿತಗೊಳ್ಳುವ ವಿದ್ಯಾರ್ಥಿಸಂಘಗಳು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸಿ ಕೊಳ್ಳಲು ಸಹಕಾರಿಯಾಗಿದೆ ಎಂದರು.
 
ನೂತನ ಪದಾಧಿಕಾರಿಗಳಿಗೆ ಕರ್ನಾಟಕ ಬ್ಯಾಂಕ್ ಎ ಜಿ ಎಂ ಗೋಪಾಲಕೃಷ್ಣ ಸಾಮಗ ಪ್ರಮಾಣ ವಚನ ಬೋಧಿಸಿದರು.​ ​ಸಂಸ್ಥೆಯ ಮೂರು ಮಂದಿ ಉಪನ್ಯಾಸಕರು ಡಾಕ್ಟರೇಟ್‌ ಪದವಿ ಹಾಗೂ ಒರ್ವ ಉಪನ್ಯಾಸಕಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಬಗ್ಗೆ  ಮುಖ್ಯ ಅತಿಥಿಗಳು ಸಮ್ಮಾನಿಸಿದರು.
ಸಮಾರಂಭದಲ್ಲಿ ಪ್ರಭಾರ ಪ್ರಾಂಶುಪಾಲ ಯಾದವ ಕರ್ಕೇರ,​ ​ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಹಿರಿಯ ಉಪನ್ಯಾಸಕ ದಯಾನಂದ ಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗೈದರು. ಉಪನ್ಯಾಸಕ ಗಂಗಾಧರ ಎ​.ವಿ ವಂದಿಸಿದರು.
 
 
 
 
 
 
 
 
 
 
 

Leave a Reply