Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ ಕಟ್ಟಡವನ್ನು ಉದ್ಘಾಟನೆ 

ನಬಾರ್ಡ್ ಸಹಯೋಗದ ಅರ್ ಐ ಡಿ ಎಪ್ ಯೋಜನೆಯಡಿಯಲ್ಲಿ ರೂಪೈ ಒಂದು ಕೋಟಿ ಎಂಟು ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡುಪಿ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ ಕಟ್ಟಡವನ್ನು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಸವರಾಜ ಬೊಮ್ಮಾಯಿ ಡಿ: 03ರಂದು ಅಪರಾಹ್ನ 12 ಕ್ಕೆ ಉದ್ಘಾಟಿಸಲಿದ್ದಾರೆ.
ಉಡುಪಿ ನಗರದ ಕೇಂದ್ರ ಭಾಗದಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿನಿಯರಿಗೆ ವಿದ್ಯಾರ್ಜನೆ ನೀಡುತ್ತಿರುವ ಸಂಸ್ಥೆಗೆ ಇತ್ತೀಚಿನ ವರ್ಷದಲ್ಲಿ ಫಲಿತಾಂಶದಲ್ಲಿ ಪ್ರಗತಿ ಹಾಗೂ ದಾಖಲಾತಿಯ ಹೆಚ್ಚಳದಿಂದಾಗಿ ತರಗತಿ ಕೋಣೆಗಳ ಕೊರತೆ ಉಂಟಾಗಿತ್ತು ಅಲ್ಲದೆ ಪಿ ಯು ಸಿ ವಿಭಾಗದಲ್ಲಿ  ಕಂಪ್ಯೂಟರ್ ಶಿಕ್ಷಣ,ಸಂಖ್ಯಾಶಾಸ್ತ್ರ ಮುಂತಾದ ಹೆಚ್ಚುವರಿ ವಿಷಯಗಳ ಸೇರ್ಪಡೆ ,ಪ್ರೌಢಶಾಲಾ ವಿಭಾಗದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್,ರಾಷ್ಟ್ರೀಯ ಕೌಶಲಾಭಿವೃದ್ದಿ ವಿಷಯಗಳು ಹೊಸದಾಗಿ ಸೇರ್ಪಡೆಗೊಂಡಿದ್ದವು.
ಶಾಸಕ ಶ್ರೀ ರಘುಪತಿ ಭಟ್ ರವರ ನೇತೃತ್ವದ ಕಾಲೇಜು ಅಭಿವೃದ್ಧಿ ಸಮಿತಿಯು ಈ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದು ಈ ನಿಟ್ಟಿನಲ್ಲಿ ಹೊಸ ಕಟ್ಟಡ ರೂಪುಗೊಂಡಿದೆ.ಪ ಪೂ ವಿಭಾಗಕ್ಕೆ 92 ಲಕ್ಷ ಅನುದಾನದ 5 ಕೊಠಡಿ ಹಾಗೂ ಪ್ರೌಢಶಾಲೆಗೆ 16 ಲಕ್ಷ ಅನುದಾನದ ಒಂದು ಕೊಠಡಿ ಸೇರಿದಂತೆ 6 ತರಗತಿ ಕೊಠಡಿಗಳು ಹಾಗೂ 12 ಶೌಚಾಲಯಗಳನ್ನು ನೂತನ ಕಟ್ಟಡದಲ್ಲಿ ನಿರ್ಮಿಸಲಾಗಿದೆ. 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!