25 C
Udupi
Tuesday, October 20, 2020

ಆಚಾರ್ಯಾಸ್ ಏಸ್:ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗೆ ದೈನಂದಿನ ತರಬೇತಿ:

ಒಂಭತ್ತನೇ, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಸಿ.ಇ.ಟಿ., ನೀಟ್,  ಜೆ.ಇ.ಇ ಮೇನ್ಸ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕ್ರಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್ ಏಸ್ ಸಂಸ್ಥೆಯು ಬ್ಯಾಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಗರಿಷ್ಠ ಫಲಿತಾಂಶಕ್ಕಾಗಿ ವಿನೂತನ ರೀತಿಯ ತರಬೇತಿಯನ್ನು ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಂಡಿದೆ. 
ಅಕ್ಟೋಬರ್ ಮೂರನೇ ವಾರದಿಂದ ಆರಂಭವಾಗಲಿರುವ ಈ ತರಬೇತಿಯಲ್ಲಿ ಅಕೌಂಟನ್ಸಿ, ಸ್ಟಟಿಸ್ಟಿಕ್ಸ್, ಬೇಸಿಕ್ ಮ್ಯಾಥ್ಸ್ ಬಗ್ಗೆ ತರಗತಿಗಳನ್ನು ನಡೆಸಲಾಗುವುದು. ಪ್ರತಿಭಾನ್ವಿತ ಪ್ರಾಧ್ಯಾಪಕ ವೃಂದದಿಂದ ಉಪನ್ಯಾಸ ಹಾಗೂ ಪರೀಕ್ಷೆ ಯಲ್ಲಿ ನಿರೀಕ್ಷಿಸಲಾಗುವ ಪ್ರಮುಖ ಅಧ್ಯಯನ ಮತ್ತು ಪ್ರಶ್ನೋತ್ತರಗಳ ಬಗ್ಗೆ ಸೂಕ್ತ ತರಬೇತಿ ಜರಗಲಿದೆ. ಜೊತೆಗೆ ಮಾದರಿ ಪರೀಕ್ಷೆಗಳನ್ನು ಕೂಡ ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳ ಹೆಚ್ಚಿನ ಅಧ್ಯಯನಕ್ಕಾಗಿ ಪ್ರಸಿದ್ಧ ಪ್ರಕಾಶಕರುಗಳ ಕೃತಿಗಳು ಸಂಸ್ಥೆಯ ಗ್ರಂಥಾಲಯದಲ್ಲಿ ಉಚಿತವಾಗಿ ಲಭ್ಯವಿರುತ್ತದೆ.
 ಐಬಿಪಿಎಸ್, ಎಸ್‌ಬಿಐ, ಹಾಗೂ ಇತರೇ ಬ್ಯಾಂಕ್‌ಗಳು ಶೀಘ್ರದಲ್ಲೇ ಅಯೋಜಿಸಲಿರುವ ಬ್ಯಾಕಿಂಗ್ ಪ್ರವೇಶ ಪರೀಕ್ಷೆಗಳಿಗಾಗಿ ದೈನಂದಿನ ತರಗತಿಗಳು ಅಕ್ಟೋಬರ್ 19 ರಿಂದ ಆರಂಭವಾಗಲಿದೆ. ಕಳೆದ 6 ವರ್ಷಗಳಿಂದ ಬ್ಯಾಂಕಿಂಗ್ ಪರೀಕ್ಷೆಗಾಗಿ ತರಬೇತಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು ಈಗಾಗಲೇ 600ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬ್ಯಾಂಕ್ ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ತರಬೇತಿಯ ಸಂದರ್ಭದಲ್ಲಿ ರೈಲ್ವೆಸ್, ಇನ್ಸೂರೆನ್ಸ್, ಐಟಿ ಹಾಗೂ ಇನ್ನೂ ವಿವಿಧ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುವುದು. ಬ್ಯಾಂಕಿಂಗ್ ಪರೀಕ್ಷೆಗಳು ಪ್ರಿಲಿಮ್ಸ್ ಹಾಗೂ ಮೇನ್ಸ್ ಮಾದರಿಯಲ್ಲಿ ಜರಗಲಿದ್ದು, ಮ್ಯಾಥ್ಸ್, ರೀಸನಿಂಗ್, ಇಂಗ್ಲೀಷ್, ಜಿ.ಕೆ, ಕರೆಂಟ್ ಅಫರ‍್ಸ್, ಕಂಪ್ಯೂಟರ್ ನಾಲೆಡ್ಜ್ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಆಡಳಿತ ಹಾಗೂ ಆರ್ಥಿಕ ಕ್ಷೇತ್ರಗಳ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಅಲ್ಲದೆ ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಶ್ನೆಗಳನ್ನು ಅತ್ಯಂತ ನಿಖರತೆಯಿಂದ ಉತ್ತರಿಸುವ ಪ್ರತಿಭೆಯನ್ನು ಪರೀಕ್ಷಾರ್ಥಿಗಳು ಅರಿತಿರಬೇಕು.

ಈ ನಿಟ್ಟಿನಲ್ಲಿ ವೇಗ ಮತ್ತು ನಿಖರತೆಯ ಪರಿಣತೆಗಾಗಿ ಅನುಭವೀ ಪ್ರತಿಭಾನ್ವಿತ ಪ್ರಾಧ್ಯಾಪಕರಿಂದತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯ ಅಂತ್ಯದಲ್ಲಿ ಮಾದರಿ ಆನ್‌ಲೈನ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿ ಗಳಿಗೆ ವಿವಿಧ ಪ್ರಕಾಶಕರುಗಳ ಕೃತಿಗಳನ್ನು ಗ್ರಂಥಾಲಯದ ವ್ಯವಸ್ಥೆಗಳ ಮೂಲಕ ನೀಡಲಾಗುವುದು.  

ಈ ತರಬೇತಿಯು ಉಡುಪಿ ತೆಂಕಪೇಟೆಯ ಶ್ರೀ ಲಕ್ಶ್ಮೀವೆಂಕಟರಮಣ ದೇವಾಲಯದ ಮುಂಭಾಗದಲ್ಲಿರುವ ಏಸ್ ಸೆಂಟರ್‌ನಲ್ಲಿ ಜರಗಲಿದ್ದು ಆಸಕ್ತ ವಿದ್ಯಾರ್ಥಿಗಳು ಈ ಕಛೇರಿಯನ್ನು (0820-4299111) ಸಂಪರ್ಕಿಸ ಬೇಕೆಂದು  ಸಂಸ್ಥೆಯ ನಿರ್ದೇಶಕ ಪಿ.ಲಾತವ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ನವರಾತ್ರಿ-೪ ~ ಎಲ್ಲೂರಿನ ‘ಅಮ್ನೂರು’~ಕೆ.ಎಲ್.ಕುಂಡಂತಾಯ

ಪಾರಂಪರಿಕ ಸಂಪ್ರದಾಯ, ಶಿಷ್ಟಾಚಾರ, ಒಡಂಬಡಿಕೆ, ಒಪ್ಪಿಗೆಗಳೊಂದಿಗೆ ಕರಾವಳಿಯಲ್ಲಿ ಅಭಿವೃದ್ಧಿಗೊಂಡ ದೇವಾಲಯ ಸಂಸ್ಕೃತಿಯ ಮಾದರಿಯಾಗಿ ಪ್ರಸಿದ್ಧಿಯನ್ನು ಪಡೆದ ದೇವಾಲಯಗಳಲ್ಲಿ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವ ಸ್ಥಾನ ಒಂದು. ಇಲ್ಲಿಯ ಉಪಸ್ಥಾನ ಸನ್ನಿಧಿಯಾಗಿ "ಅಮ್ನೂರು"...

ಇಂಜಿನಿಯರಿಂಗ್ ಗೆ ಆಸರೆಯಾದ ಹೈನುಗಾರಿಕೆ.

ಗಂಡು ದಿಕ್ಕಿಲ್ಲದ ಕುಟುಂಬವೊಂದಕ್ಕೆ ಹೈನುಗಾರಿಕೆ ಆಸರೆಯಾಗಿ, ಹೆಣ್ಣು ಮಕ್ಕಳ ಭವಿಷ್ಯ ಒಂದು ಹಂತ ತಲುಪಲು ಸಹಕಾರಿಯಾಗಿದೆ. ನೀರೆ ಬೈಲೂರಿನ  ಸುಜಾತ ಪ್ರಭು ಮತ್ತು ದಿವಂಗತ ಸುಬ್ರಾಯ ಪ್ರಭು ದಂಪತಿಗೆ ನಾಲ್ವರು ಹೆಣ್ಣುಮಕ್ಕಳು. ಕ್ಯಾನ್ಸರ್...

ಮುಗಿಯದು ಮುಂದಿನ ದಾರಿ~Click:Ashok Donderangadi

ಮುಗಿಯದು ಮುಂದಿನ ದಾರಿ ಸಾಗಿದಷ್ಟೂ ಇದೆ ಬಯಲು..! ಸಾಗಬೇಕು ಸಂತಸದಿ ಸದಾ ಮೊಗಾರವಿಂದ ಅರಳಿದಂತೆ..! ಸಾಗುವುದು ಬದುಕ ಪಥ ಹೀಗೆಯೇ ಎಂದಿನಂತೆ...!! ಎತ್ತಿನ ಗಾಡಿಯನೇರಿ ಸಾಗುವಾಗ ಕೇಳಿಸುವ ಗಾಲಿಯ ಶಬ್ದ, ಗೊರಸುಗಳು ನೆಲಕ್ಕೆ ಬಲವಾಗಿ ಊರಿದಾಗ ಬರುವ ಗತ್ತಿನ ಸದ್ದು,ಗಾಡಿಗೆ ಕಟ್ಟಿದ...

ಉಡುಪಿಯಲ್ಲಿ 50ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

ಉಡುಪಿ: ಭಾನುವಾರದಂದು ಉಡುಪಿ ಜಿಲ್ಲಾ ಬೌದ್ಧ ಮಹಾಸಭಾ ವತಿಯಿಂದ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರ 64ನೇ ದಮ್ಮ ಚಕ್ರ ಪ್ರವರ್ತನಾ ದಿನಾಚರಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಜಿಲ್ಲೆಯ ಸುಮಾರು 50ಕ್ಕೂ ಅಧಿಕ ದಲಿತರು...

ಹೆಲ್ಮಟ್ ಹಾಕದೆ ವಾಹನ ಚಾಲನೆ, ಮೂರೂ ತಿಂಗಳ ಪರವಾನಿಗೆ ರದ್ದು

ಬೆಂಗಳೂರು: ಇನ್ನು ಮುಂದೆ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಕೇವಲ ದಂಡ ಮಾತ್ರವಲ್ಲ ಬದಲಾಗಿ ಮೂರು ತಿಂಗಳು ಚಾಲಕನ ಪರವಾನಗಿ ಅಮಾನತು ಮಾಡಲು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದೀಗ ರಾಜ್ಯ ಸರ್ಕಾರ ಈ...
error: Content is protected !!