ನಿತ್ಯಾನಂದ ಎನ್ ರವರ ರಾಜ್ಯಶಾಸ್ತ್ರ ಕೃತಿ ಬಿಡುಗಡೆ 

​ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇದರ ರಾಜ್ಯಶಾಸ್ತ್ರ ಸಂಘ, ಕಾಲೇಜು ಅಧ್ಯಾಪಕರ ಸಂಘ ಹಾಗೂ ಅಂತರಿಕ ಗುಣಮಟ್ಟ ಭರವಸಾ ಕೋಶದ ಸಂಯುಕ್ತ ಆಶ್ರಯ ದಲ್ಲಿ, ಶ್ರೀ ನಿತ್ಯಾನಂದ ಎನ್  ರವರ “ಆಧುನಿಕ ರಾಜಕೀಯ  ವ್ಯವಸ್ಥೆಗಳು” ರಾಜ್ಯಶಾಸ್ತ್ರ ಕೃತಿಯನ್ನು ಜಿಲ್ಲಾಧಿಕಾರಿ ಜಿ ಜಗದೀಶ ರವರು  ಬಿಡುಗಡೆ ಮಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಎದುರಿಸಲು ಕನ್ನಡ ಮಾದ್ಯಮದ ಪುಸ್ತಕಗಳ ಬರವಣಿಗೆ ಅಗತ್ಯ ಇದೆ  ಎಂದರು.
ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ ಭಂಡಾರಿ ಪ್ರಾಸ್ತವಿಕ ಮಾತಾನಾಡಿ ಅತಿಥಿಗಳನ್ನು ಸ್ವಾಗತಿಸಿದರು. ದಿವಾ ನಂಬಿಯಾರ್, ಪುಸ್ತಕ ಪ್ರಕಾಶಕರು,  ರಮಾಕಾಂತ ಪುರಾಣಿಕ್  ಕಾಲೇಜು ಅಧ್ಯಾಪಕರ ಸಂಘದ ಸಂಚಾಲಕರು ಉಪಸ್ಥಿತರಿದ್ದರು.  ನಾಗರತ್ನ ಪ್ರಾರ್ಥಿಸಿದರು. ಸುಚಿತ್ರಾ ಟಿ ನಿರೂಪಿಸಿ, ನಿತ್ಯಾನಂದ ಎನ್ ವಂದಿಸಿದರು.

Leave a Reply