ಯಕ್ಷಗಾನ ತರಬೇತಿ ಶಿಬಿರ

ಉಡುಪಿಯ ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಗವತೀ ಸಭಾಗೃಹದಲ್ಲಿ ಬಡಗುತಿಟ್ಟು ಯಕ್ಷಗಾನ ತರಬೇತಿ ಆರಂಭವಾಗಲಿದೆ. ಶ್ರೀ ಭಗವತೀ ಯಕ್ಷಕಲಾ ಬಳಗ ರಿ. ಪುತ್ತೂರು ಇವರ ಆಶ್ರಯದಲ್ಲಿ ಗುರುಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಅವರು ತರಬೇತಿ ನೀಡಲಿದ್ದಾರೆ. ಬಡಗುತಿಟ್ಟಿನ ಹೆಜ್ಜೆಗಾರಿಕೆ ಭಾಗವತಿಕೆ ಹಾಗೂ ತಾಳಮದ್ದಳೆ ಅರ್ಥಗಾರಿಕೆಯ ತರಬೇತಿಯ ತರಗತಿಯು ಫೆಬ್ರವರಿ 17ರ ಗುರುವಾರ ಆರಂಭಗೊಳ್ಳಲಿದೆ. ಉಡುಪಿಯ ಯಕ್ಷ ಕಲಾರಂಗದ ಕಾರ್ಯದರ್ಶಿಯವರಾದ ಮುರಳೀ ಕಡೆಕಾರ್ ಉದ್ಘಾಟಿಸಲಿರುವರು. ಪ್ರತೀ ಗುರುವಾರದಂದು ಸಂಜೆ 6 ರಿಂದ ತರಬೇತಿಯ ಸಮಯವಾಗಿದ್ದು, ಯಕ್ಷಗಾನ ಕಲಿಕಾಸಕ್ತರು ಸದುಪಯೋಗ ಪಡಿಸಿಕೊಳ್ಳ ಬಹುದಾಗಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೇ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೂ ಅವಕಾಶ ಕಲ್ಪಿಸಲಾಗಿದೆ. ಭಗವತೀ ಯಕ್ಷಕಲಾ ಬಳಗದ ವತಿಯಿಂದ ಈಗಾಗಲೇ ಪ್ರತೀ ಶನಿವಾರ ಹಾಗೂ ಭಾನುವಾರ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳದ ತರಗತಿಯು ಚಾಲ್ತಿಯಲ್ಲಿದ್ದು ಆಸಕ್ತರು ಸಂಪರ್ಕಿಸಲು ಅಧ್ಯಕ್ಷರಾದ ಪ್ರಮೋದ್ ತಂತ್ರಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply