ಕಾರ್ಕಳ ಶಿಕ್ಷಕಿಯರ ತಾಳಮದ್ದಳೆ ತಂಡ ಉದ್ಘಾಟನೆ, ಪ್ರದರ್ಶನ.

ಕಾರ್ಕಳ ತಾಲೂಕಿನ ಶಿಕ್ಷಕಿಯರ ತಾಳಮದ್ದಳೆ ತಂಡವು ಯಕ್ಷಗುರು ಪಿ.ವಿ. ಆನಂದ ಅವರ ನೇತೃತ್ವದಲ್ಲಿ ಸಿದ್ಧವಾಗಿದ್ದು ಅದರ ಉದ್ಘಾಟನಾ ಸಮಾರಂಭವು ನಾಟ್ಕದೂರು ಮುದ್ರಾಡಿಯಲ್ಲಿ ಡಿಸೆಂಬರ್ 20ರಂದು ನಡೆಯಿತು. ಉದ್ಘಾಟನೆ ನೆರವೇರಿಸಿದ ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಸ್. ಶಶಿಧರ ಅವರು ಚೆಂಡೆ ನುಡಿಸುವ ಮೂಲಕ ತಾಳಮದ್ದಳೆ ತಂಡವನ್ನು ಉದ್ಘಾಟನೆ ಮಾಡಿ ಶುಭ ಹಾರೈಸಿದರು.ಹೆಬ್ರಿ ಕ.ಸಾ. ಪ. ಅಧ್ಯಕ್ಷ ಪಿ. ವಿ. ಆನಂದ್ ಅವರು ಅಧ್ಯಕ್ಷತೆ ವಹಿಸಿದ್ದರು. ಧರ್ಮಪಾರ್ತಿ ಮೋಹನ್ ಗುರೂಜಿ ಆಶೀರ್ವಚನಗೈದರು. ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು ಸ್ವಾಗತಿಸಿದರು. ನಮ ತುಳುವೆರ್ ಸಂಘಟನೆಯ ಅಧ್ಯಕ್ಷರಾದ ಸುಕುಮಾರ ಮೋಹನ್ ಧನ್ಯವಾದ ಅರ್ಪಿಸಿದರು. ಕಾರ್ಕಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಪೆನ್ ಟೀಮ್, ಕಾರ್ಕಳ ಮತ್ತು ಹೆಬ್ರಿ ಕಸಾಪ ಘಟಕಗಳು, ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಈ ಕಾರ್ಯಕ್ರಮದ ಆತಿಥ್ಯ ವಹಿಸಿದ್ದವು. ಹಿಂದೀ ಶಿಕ್ಷಕ ಮಹೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.ಕಾರ್ಯಕ್ರಮದ ನಂತರ ಶಿಕ್ಷಕಿಯರಿಂದ ಪಠ್ಯ ಪುಸ್ತಕ ಆಧಾರಿತ ರಾಮ ಧಾನ್ಯ ಚರಿತೆ ಮತ್ತು ಯಶೋಧರೆ ಪ್ರಸಂಗಗಳ ತಾಳಮದ್ದಳೆ ನಡೆಯಿತು. ರವಿ ಕುಮಾರ್ ಸೂರಾಲು ಅವರು ಭಾಗವತರಾಗಿ ಭಾಗವಾಗಿದ್ದರು.

 
 
 
 
 
 
 

Leave a Reply