ಯಕ್ಷೋತ್ಸಾಹಿಗಳ ಶಾರದಾ ಪೂಜೆ

ಉಡುಪಿ: ಪ್ರತಿಭಾ ಜ್ಞಾನ ಭಂಡಾರದ ಸಹಯೋಗದಲ್ಲಿ ಕುಂಜಿಬೆಟ್ಟಿನ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ಶಾರದಾ ಪೂಜೆ ಯನ್ನು ತಾಳಮದ್ದಳೆ ಯೊಂದಿಗೆ ವಿಶೇಷವಾಗಿ ನೆರವೇರಿಸಲಾಯಿತು.

ಭಾನುವಾರದಂದು ಗಣೇಶ ಕೊಲಕಾಡಿ ವಿರಚಿತ ‘ಸಮರ ಸೌಗಂಧಿಕಾ’ಎಂಬ ಪ್ರಸಂಗದ ತಾಳಮದ್ದಳೆಯೊಂದಿಗೆ ಕಲಾಧಿದೇವತೆ ಶಾರದೆಗೆ ಪೂಜೆ ಸಲ್ಲಿಸಲಾಯಿತು.ಪ್ರತಿ ವರ್ಷ ಹಲವಾರು ವೀಕ್ಷಕರನ್ನು ಒಳಗೊಂಡು ನಡೆಯುತ್ತಿದ್ದ ತಾಳಮದ್ದಳೆಯು ಈ ಬಾರಿ ಕೊರೋನಾ ಹಿನ್ನೆಲೆ ಫೇಸ್ ಬುಕ್ ಲೈವ್ ನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಭೀಮನ ಅರ್ಥಧಾರಿಯಾಗಿದ್ದ, ಪ್ರಜ್ವಲ್ ಪೆಜತ್ತಾಯ ಕೇಳುಗರ ಮನಸೆಳೆದರು.ಹನುಮಂತನಾಗಿ ಶಿವಕುಮಾರ ಬಿ.ಎ ಅಳಗೋಡು, ದ್ರೌಪದಿಯಾಗಿ ದೀವಿತ್ ಕೋಟ್ಯಾನ್, ಭಾಗವತಿಕೆಯಲ್ಲಿ ಮತ್ತು ಕುಬೇರನಾಗಿ ಶ್ರೀ ನಿಧಿ ಆಚಾರ್ಯ ಅತ್ಯಂತ ಸುಂದರವಾಗಿ ಪ್ರಸಂಗವನ್ನು ಕಟ್ಟಿಕೊಟ್ಟರು. ಹಾಗೆ ಚೆಂಡೆಮದ್ದಳೆಯಲ್ಲಿ ಮಯೂರ ನಾಯ್ಗ, ಸವಿನಯ ನೆಲ್ಲಿತೀರ್ಥ, ಅವಿನಾಶ್ ಚಣಿಲ, ಯಜ್ನೇಶ್ ರೈ ಮತ್ತು ಪ್ರಥ್ವೀಶ್ ಪರ್ಕಳ ಸಹಕರಿಸಿದರು.

ತಾಳಮದ್ದಳೆಯ ನಂತರ ವಿವಿಧ ವಾದ್ಯಗಳ ಸಹಿತವಾಗಿ ಡಾ. ಅರ್ಜುನ್ ಇವರ ನೇತೃತ್ವದಲ್ಲಿ ಶಾರದಾ ಪೂಜೆ ಸಂಪನ್ನಗೊಂಡಿತು.ತಂಡದ ಫೇಸ್ಬುಕ್ ಪೇಜ್ ಲೈವ್ ನಲ್ಲಿ ಸಾವಿರಾರು ಜನರು ಇದನ್ನು ವೀಕ್ಷಿಸಿದ್ದು, ತಂಡದ ಸದಸ್ಯರಲ್ಲಿ ಇನ್ನು ಬೇರೆ ಬೇರೆ ಕಾರ್ಯಕ್ರಮ ರೂಪಿಸುವಲ್ಲಿ ಉತ್ಸಾಹ ಮೂಡಿಸಿದೆ.

ಪ್ರತಿಭಾ ಜ್ಞಾನ ಭಂಡಾರದ ಪ್ರತಿಭಾ ಆಚಾರ್ಯ, ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರ ತಂಡದ ಅಧ್ಯಕ್ಷೆ ಸುಮಿತ್ರಾ ಕೆರೆಮಠ, ಖಜಾಂಚಿ ಕಾರ್ತಿಕ್ ಪ್ರಭು, ಸಂಚಾಲಕ ಶ್ರೀನಿಧಿ ಆಚಾರ್ಯ ಮತ್ತು ತಂಡದ ಸದಸ್ಯರು ಪಾಲ್ಗೊಂಡಿದ್ದರು.

 
 
 
 
 
 
 
 
 
 
 

1 COMMENT

Leave a Reply