ಯಾಕ್ಷಾಭಿನಯ ಬಳಗ ಮಂಗಳೂರು ಇವರಿಂದ 2ನೇ ವರ್ಷದ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ

ಮಂಗಳೂರು : ಯಾಕ್ಷಾಭಿನಯ ಬಳಗದ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ಇತ್ತೀಚಿಗೆ ಮಂಗಳೂರು ಪುರಭವನದಲ್ಲಿ ಜರಗಿತು. 

ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತಾ ಶೆಟ್ಟಿ ಅಲಂಕರಿಸಿದ್ದರು. ಅವರು ಮಾತನಾಡುತ್ತ, ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನದ ಹೆಜ್ಜೆ ಕಲಿಸಿ, ಗೆಜ್ಜೆ ಕಟ್ಟಿಸಿ ಮಂಗಳೂರಿನ ಜನತೆಗೆ ಪ್ರದರ್ಶನ ಕೊಡುತ್ತಿರುವ ಯಾಕ್ಷಾಭಿನಯ ಬಳಗದ ಕಾರ್ಯ ಸ್ತುತ್ಯರ್ಹ ಎಂದು ಹೇಳಿದರು.

ಹಿರಿಯ ಕಲಾವಿದರಾದ ಕಾರ್ಗಲ್ಲೂ ವಿಶ್ವೇಶ್ವರ ಭಟ್, ಸೀತಾರಾಮ ಕುಮಾರ್ ಕಟೀಲು, ವಿಮರ್ಶಕ ಆರ್. ಎನ್. ನಾಯ್ಕ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯ ವೈದ್ಯಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಅತಿಥಿಗಳಾಗಿದ್ದರು. ಖ್ಯಾತ ಬಡಗುತಿಟ್ಟು ಭಾಗವತರದ ಜನ್ಸಾಲೆ ರಾಘವೇಂದ್ರ ಆಚಾರ್ಯ,ಪ್ರಸಾದ್ ಮೊಗೆಬೆಟ್ಟು ಉಪಸ್ಥಿತರಿದ್ದರು.

ಯಕ್ಷಗಾನ ಗುರು ಐರೋಡಿ ಮಂಜುನಾಥ ಕುಲಾಲ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಬಿಜೈ ಕಾಪಿಕಾಡ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಕ್ಯೋಪಾಧ್ಯಾಯನಿ ಪಾವನ ಕೆ. ರನ್ನು ಸನ್ಮಾನಿಸಲಾಯಿತು. ಯಕ್ಷಾಭಿನಯ ಬಳಗದ ಅಧ್ಯಕ್ಷ ಪ್ರಶಾಂತ ಕುಮಾರ್ ಪ್ರಸ್ತಾವನೆ ಮಾಡಿ,ಕಾರ್ಯದರ್ಶಿ ಸಂತೋಷ ಕುಮಾರ್ ಸ್ವಾಗತಿಸಿ, ಸದಸ್ಯ ರಾಮಕೃಷ್ಣ ಮರಾಟೆ ವಂದಿಸಿದರು. 

ಯಕ್ಷಾಭಿನಯ ಬಳಗದ ಸದಸ್ಯರಿಂದ ಗುರು ಮಂಜುನಾಥ ಕುಲಾಲ್ ನಿರ್ದೇಶನದಲ್ಲಿ ಪರಂಪರೆಯ ಅಭಿಮನ್ಯು ಕಾಳಗ ಮತ್ತು ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಜರಗಿತು.

 
 
 
 
 
 
 
 
 
 
 

Leave a Reply