ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ಇದರ ನೃತ್ಯ ನಿರ್ದೇಶಕಿ ನೃತ್ಯವಿದುಷಿ ಶ್ರೀಮತಿ ವೀಣಾ ಮುರುಳೀಧರ ಸಾಮಗ

ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಶ್ರೀ ಕೃಷ್ಣ ಮಠ, ಉಡುಪಿ ಹಾಗೂ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ ದಿನಾಂಕ 26.11.2023, ಆದಿತ್ಯವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಭರತಮುನಿ ಜಯಂತ್ಯೋತ್ಸವ  ಕಾರ್ಯಕ್ರಮವನ್ನು ನಡೆಯಲಿದೆ.
ಕಾಣಿಯೂರು ಮಠದ  ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದಂಗಳವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸ ಲಿದ್ದಾರೆ. ಉಡುಪಿ ಜಿಲ್ಲೆಯ ಪ್ರಸಿದ್ಧ ವಕೀಲ ಎಸ್.ಎಸ್. ಪ್ರಸಾದ್. ರವರು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವವರು. ಅತಿಥಿಯಾಗಿ ಮಂಗಳೂರಿನ ನಾಟ್ಯರಾಧನಾ ಕಲಾ ಕೇಂದ್ರದ ನೃತ್ಯ ವಿದುಷಿ ಶ್ರೀಮತಿ ಸುಮಂಗಲ ರತ್ನಾಕರ ಹಾಗೂ ಕೊಡವೂರು ಉಡುಪರತ್ನ ಪ್ರತಿಷ್ಠಾನದ ನಿರ್ದೇಶಕಿ ಪೂರ್ಣಿಮಾ ಜನಾರ್ದನ್ ಆಗಮಿಸಲಿರುವರು.
ಈ ಸಂದರ್ಭದಲ್ಲಿ ಡಾ। ಕೆ.ಕುಮಾರ್, ವಿದುಷಿ ಶ್ರೀಮತಿ ಶಾರದಾ ಮಣಿ ಶೇಖರ್,ಮೈಸೂರ್ ಎಂ ಗುರುರಾಜ್ ಇವರಿಗೆ ಭಾರತ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಲಾರ್ಪಣ ಪ್ರಸಸ್ತಿಯನ್ನು ಉದಯ ಕುಮಾರ್ ಹಾಗು ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿಯನ್ನು ವಿದುಷಿ ಶ್ರೀಮತಿ ಅದಿತಿ ಸನ್ನಿಧಿ, ವಿದುಷಿ ಶ್ರೀಮತಿ ಅಶ್ವಿನಿ ಮನೋಹರ್ ಹಾಗು ವಿದುಷಿ ಕು।  ಸ್ವಾತಿ ಉಪಾಧ್ಯ  ಇವರುಗಳಿಗೆ ನೀಡಿ ಗೌರವಿಸಲಾಗುವುದು. ಎಂದು  ನೃತ್ಯ ವಿದುಷಿ  ಶ್ರೀಮತಿ ವೀಣಾ ಎಂ ಸಾಮಗ, ಪವನರಾಜ್ ಸಾಮಗ, ವಿದುಷಿ ಅಮೃತಾ ಪ್ರಸಾದ್, ವಿದುಷಿ ಶ್ರೀಕಲ್ಯಾಣಿ ಪೂಜಾರಿ ವಿದುಷಿ ರಾಧಿಕಾ ರಾವ್ ಸಂಯುಕ್ತವಾಗಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply