ಉಡುಪಿ : ಯಕ್ಷನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆ 

ಉಡುಪಿ : ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ಯಕ್ಷನಿಧಿ ಕಳೆದ 22 ವರ್ಷಗಳಿಂದ ಯಕ್ಷಗಾನ ಕಲಾವಿದರ ಕ್ಷೇಮಚಿಂತನೆಗೆ ಹಲವು ಯೋಜನೆಗಳ ಮೂಲಕ ಕೆಲಸ ಮಾಡುತ್ತಿದ್ದು ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಗಮನಿಸಿ ಕಡತೋಕ ಕೃಷ್ಣ ಭಾಗವತರ ಸಂಸ್ಮರಣ ವೇದಿಕೆ ರೂ. ಒಂದು ಲಕ್ಷ ನಿಧಿ ಸಮರ್ಪಿಸಿ ಪ್ರೋತ್ಸಾಹಿಸಿದೆ. 

ಕೃಷ್ಣ ಭಾಗವತರು ಕರ್ಕಿ, ಇಡಗುಂಜಿ , ಕೊಳಗಿಬೀಸ್, ಧರ್ಮಸ್ಥಳ, ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು, ಸುರತ್ಕಲ್,ಮೂಲ್ಕಿ ಸೇರಿದಂತೆ ಹಲವು ಮೇಳಗಳಲ್ಲಿ ನಾಲ್ಕು ದಶಕಗಳ ಕಲಾಸೇವೆ ಮಾಡಿ ಪ್ರಸಿದ್ಧರಾಗಿದ್ದರು. ಕಡತೋಕ ಕೃಷ್ಣ ಭಾಗವತ ಸಂಸ್ಮರಣ ವೇದಿಕೆ ಈವರೆಗೆ ತಲಾ ರೂ. 5000 ನಗದು ಪುರಸ್ಕಾರದೊಂದಿಗೆ 38 ಕಲಾವಿದರನ್ನು ಸಮ್ಮಾನಿಸಿದೆ.

ಶ್ರೇಷ್ಠ ಕಲಾವಿದರ ನೆನಪಿನಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವ ಭಾಗವತರ ಸುಪುತ್ರ ಎಂ.ಕೆ.ಭಟ್ ಮತ್ತು ವೇದಿಕೆಯ ಸರ್ವ ಸದಸ್ಯರಿಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply