ಪರ್ಯಾಯ ಕೃಷ್ಣಾಪುರ ಮಠದಲ್ಲಿ ದಶಾವತಾರ ಕಾವಿ ಚಿತ್ರಕಲೆ

ಕಾಣಿಯೂರು ಮಠದಲ್ಲಿ ಕಾವಿ  ಕಲಾ ವೈಭವ  -ಉಡುಪಿ ರಥಬೀದಿಯ ಕಾಣಿಯೂರು ಮಠದ ಒಳಗಿನ ಸುತ್ತುಪೌಳಿ ಯನ್ನು ಕಾವಿ ಚಿತ್ರಕಲೆಯಿಂದ  ಶೃಂಗರಿಸಲಾಗಿದೆ. ದಶಾವತಾರ ರೂಪಗಳನ್ನು  ಹಾಗೂ ಇತರ 10 ಚಿತ್ರಗಳನ್ನು (ಶ್ರೀ ಪಟ್ಟಾಭಿರಾಮ, ಗರುಡವಾಹನ ವಿಷ್ಣು, ಲಕ್ಷ್ಮಿ ನರಸಿಂಹ, ಅನಂತಪದ್ಮನಾಭ, ವೇದವ್ಯಾಸರು, ಹಯಗ್ರೀವ ದೇವರು, ಹನುಮಂತ, ಗರುಡ, ಜಯ, ವಿಜಯ ಇತ್ಯಾದಿ) ಕಾವಿ ಚಿತ್ರ ಕಲೆಯಲ್ಲಿ ರಚಿಸಲಾಗಿದೆ. 
ಸ್ವಾಮೀಜಿ ಅವರ ಸಂಕಲ್ಪದಂತೆ  ಪರ್ಯಾಯೋತ್ಸವದ ಮೊದಲು ರಚಿಸಬೇಕೆಂಬ ಉದ್ದೇಶದಿಂದ ಈ ಚಿತ್ರಗಳನ್ನು ಕೇವಲ ಹನ್ನೆರಡು ದಿನಗಳಲ್ಲಿ ರಚಿಸಲಾಗಿದೆ. ಪ್ರಸಿದ್ಧ ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ ಹಾಗೂ ಅವರ ಮಗ ಡಾ. ಪ್ರಮೋದನ ಉಪಾಧ್ಯಾಯ ಸೇರಿಕೊಂಡು ಈ ಚಿತ್ರಗಳನ್ನು ಮಾಡಿದ್ದಾರೆ. 
ಉಡುಪಿ ಪರಿಸರದಲ್ಲಿ ಇದೇ ಮೊದಲ ಬಾರಿಗೆ ಮಠವೊಂದರಲ್ಲಿ ಇಷ್ಟು ಕಾವಿಕಲೆ ಚಿತ್ರಗಳನ್ನು ರಚಿಸಿರುವುದು ದಾಖಲೆಯಾಗಿದೆ. ಚಿತ್ರ ಗಳಲ್ಲಿ ಮುಗ್ಧ ಮನೋಹರ ದೇವತಾ ಸ್ವರೂಪಗಳಿವೆ ಪಾರಂಪರಿಕ ಸ್ಪರ್ಶವಿದೆ. ಭಕ್ತರಿಗೆ ಭಕ್ತಿ ಭಾವ ಹುಟ್ಟಿಸುವ  ಆಶಯವಿದೆ.
ಮಠದೊಳಗೆ ಪ್ರವೇಶಿಸುವಾಗ ಆರ್ಟ್ ಗ್ಯಾಲರಿ ಒಳಗೆ ಹೋದ ಅನುಭವವಾಗುತ್ತದೆ. ಕಲಾ ಪ್ರೋತ್ಸಾಹಕರಾದ ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಆಶಯದಂತೆ ಚಿತ್ರರಚನೆ ನಡೆದಿದೆ. ಪರ್ಯಾಯೋತ್ಸವಕ್ಕೆ ಉಡುಪಿಗೆ ಆಗಮಿಸುವ ಭಕ್ತರಿಗೆ ಈ ಚಿತ್ರಗಳು ಕಲಾರಸ ಉಣಿಸುವಂತಿವೆ.
 
 
 
 
 
 
 
 
 
 
 

Leave a Reply