ಈ ಸೃಷ್ಟಿಯು ಸತ್ಯ ಸಾಕ್ಷಾತ್ಕಾರದ ವೇದಿಕೆ -ಗುರ್ಮೆ ಸುರೇಶ್ ಶೆಟ್ಟಿ.

ಉಡುಪಿ: ಜಗತ್ತು ಹಲವು ವಾಸ್ತವ ಮತ್ತು ಹಲವು ಭ್ರಾಮಕದ ಗೂಡು. ಇಲ್ಲಿ ಸಮ ಮನಸ್ಥಿತಿಯ ವಿಶ್ವಸ್ತ ಸಂಘಟನೆಯ ಪ್ರಜ್ಞೆಯಿದ್ದಾಗ ಮಾತ್ರ ಯಶೋಗಾಥೆ ಅರಳುತ್ತದೆ. ಕಲೆ, ಸಂಸ್ಕೃತಿ, ಸಾಹಿತ್ಯ, ಪಾಂಡಿತ್ಯ ಇತ್ಯಾದಿ ಅನೇಕ ಮೌಲ್ಯಗಳೊಂದಿಗೆ ಮಾನವನ ಅಂತರಂಗದ ಅನು ಸಂಧಾನವಾಗುವ ಈ ಸೃಷ್ಟಿಯೊಂದು ಸತ್ಯ ಸಾಕ್ಷಾತ್ಕಾರದ ವೇದಿಕೆ ಎಂದು ಉದ್ಯಮಿ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಸುಮನಸಾ ಕೊಡವೂರು ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ಕ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಂಸ್ಕೃತಿ ನಿರ್ದೇಶನಾಲಯ ನವ ದೆಹಲಿ, ನಗರಸಭೆ ಉಡುಪಿ ಹಾಗೂ ಶ್ರೀ ಪೇಜಾವರ ಅಧೋಕ್ಷಜ ಮಠ  ಇವರ ಸಹಯೋಗದೊಂದಿಗೆ  ಹಮ್ಮಿಕೊಂಡಿರುವ ರಂಗಹಬ್ಬ -೯ರ ೩ನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನ್ನಾಡುತ್ತಾ ಈ ಸಂಸ್ಥೆ ಸಮಾಜಕ್ಕೆ ಆದರ್ಶಪ್ರಾಯವಾದ ಕೊಡುಗೆಯನ್ನು ನೀಡುತ್ತಿದೆ. 
ಪುಟ್ಟ ಮಕ್ಕಳಿಗೆ ಸಂಸ್ಕಾರ ನೀಡಿ ಸಂಘಟನಾತ್ಮಕವಾಗಿ, ಸಮಾಜಮುಖಿಯಾಗಿ ಬೆಳೆಸುವ ಸುಮನಸಾದ ಶ್ರದ್ದೆಯನ್ನು ಅಭಿನಂದಿಸುತ್ತೇನೆ ಎಂದರು.  ಈ ಸಂದರ್ಭದಲ್ಲಿ ಎಂ.ಸಿ. ಚಂದ್ರ ಶೇಖರ್ ಅವರಿಗೆ ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು, 
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ  ಉಡುಪಿ ತುಳುಕೂಟ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಕೆ.ಎಂ.ಎಫ್. ನಿವೃತ್ತ ಸಹಾಯಕ ನಿರ್ದೇಶಕ ರಂಗೇಗೌಡ ಕೆ.ಎಸ್, ಉದ್ಯಮಿಗಳಾದ ಮಮತ ಪಿ.ಶೆಟ್ಟಿ, ಮಂಜುನಾಥ್ ಭಟ್, ಲೋಕನಾಥ್ ಕೋಟ್ಯಾನ್ ಹಾಗೂ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಕೋಶಾಧಿಕಾರಿ ಚಂದ್ರಕಾಂತ್ ಕುಂದರ್, ಸುರೇಶ್ ಸುವರ್ಣ ಕುರ್ಕಾಲು ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ರಂಗ ಸಂಘಟಕ ಎಂ.ಸಿ. ಚಂದ್ರ ಶೇಖರ್ ಅವರನ್ನು ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ದಿವ್ಯರಂಗ ಬೆಂಗಳೂರು ತಂಡದಿಂದ  ಮಾಯ ಮೋಹಜಾಲ ನಾಟಕ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply