ಸುಮನಸಾ ಕೊಡವೂರು ರಂಗಹಬ್ಬ ಸಮಾರೋಪ, ಪ್ರಶಸ್ತಿ ಪ್ರಧಾನ

ಮೌಲ್ಯಾತ್ಮಕ ರಂಗಪ್ರದರ್ಶನಗಳ ಸಂಖ್ಯೆ ಹೆಚ್ಚಲಿ~ರವೀಂದ್ರ ಪೂಜಾರಿ​ ಉಡುಪಿ
​​
ಯಾವುದೇ ಭಾಗದಲ್ಲಿ ರಂಗಚಟುವಟಿಕೆಗಳು​ ನಡೆದರೂ ಅಲ್ಲಿ ಉತ್ತಮ ವಾತಾವರಣನಿರ್ಮಾಣ ಗೊಳ್ಳುತ್ತದೆ. ಇದು ಸಮೂಹ ಚಿಂತನೆಗೆ​ ಸಹಕಾರವಾಗುತ್ತದೆ. ಆದುದರಿಂದ ಪ್ರತಿ ಊರಿನಲ್ಲೂ ನಾಟಕ​ ಸೇರಿದಂತೆ ಮೌಲ್ಯಾತ್ಮಕ ರಂಗಪ್ರದರ್ಶನಗಳ​ ​ಸಂಖ್ಯೆಯು ಹೆಚ್ಚಬೇಕು ಎಂದು ಕಲಾ ಪೋಷಕ​ ರವೀಂದ್ರ ಪೂಜಾರಿ ಅಭಿಪ್ರಾಯಪಟ್ಟರು​. 

ಅವರು ರವಿವಾರ ಸುಮನಸಾ ಕೊಡವೂರು ಉಡುಪಿ​ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಕನ್ನಡ ಮತ್ತು​ ಸಂಸ್ಕೃತಿ ಇಲಾಖೆ ಬೆಂಗಳೂರು, ಸಂಸ್ಕೃತಿ​ ನಿರ್ದೇಶನಾಲಯ ನವ ದೆಹಲಿ, ನಗರಸಭೆ ಉಡುಪಿ ಹಾಗೂ​ ಶ್ರೀ ಪೇಜಾವರ ಅಧೋಕ್ಷಜ ಮಠ ಇವರ​ ಸಹಯೋಗದೊಂದಿಗೆ ಹಮ್ಮಿ ಕೊಂಡಿರುವ ರಂಗಹಬ್ಬ –​ ​9ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ​ ಮಾತನಾಡಿ ಸುಮನಸಾವು ಪ್ರಯೋಗ ರಂಗ, ಸಾಮಾಜಿಕ​ ನಾಟಕ, ಯಕ್ಷಗಾನದಂತಹ ಸಕ್ರೀಯಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ.

ಪ್ರಸ್ತುತ ದಿನದ ಸವಾಲಿನ ನಡುವೆಯೂ​ ರಂಗಹಬ್ಬವನ್ನು ಯಶಸ್ವಿಗೊಳಿಸಿರುವುದು ಸಂಘಟನಾಶಕ್ತಿಯ ಸಾಬೀತೇ ಸರಿ ಎಂದರು.​ ಈ ಸಂದರ್ಭದಲ್ಲಿ ಯಕ್ಷಗಾನ ಉನ್ನತಿಗೆ ಸದಾ ಶ್ರದ್ಧಾಬದ್ಧರಾಗಿದ್ದ ದಿವಂಗತ ಯು.ದುಗ್ಗಪ್ಪ ಸ್ಮರಣೆ​ ಯಕ್ಷಸುಮ ಪ್ರಶಸ್ತಿಯನ್ನು ಯಕ್ಷಗಾನ ಗುರು​ ಬಿರ್ತಿ ಬಾಲಕೃಷ್ಣ ಗಾಣಿಗ ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯ​ಕ್ರಮದಲ್ಲಿ ಮುಖ್ಯತಿಥಿಗಳಾಗಿ ದ.ಕ. ಮತ್ತು​ ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್​ ಸುವರ್ಣ, ಸಾಫಲ್ಯ ಟ್ರಸ್ಟ್ನ ಪ್ರವರ್ತಕರಾದ ನಿರುಪಮಾಶೆಟ್ಟಿ, ಉದ್ಯಮಿ ಹರೀಶ್ ಶ್ರೀಯಾನ್ ಹಾಗೂ ಸುಮನಸಾ​ ಗೌರವಾಧ್ಯಕ್ಷ ಎಮ್.ಎಸ್.ಭಟ್, ಅಧ್ಯಕ್ಷ ಪ್ರಕಾಶ್ಜಿ.ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ತಿಕ್ ಹಾಗೂ ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.​ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ ದರು. ನಾಗೇಶ್ ಪ್ರಸಾದ್​ ವಂದಿಸಿದರು. ಬಳಿಕ ಸನ್ನಿಧಿ ಕಲಾವಿದರು ಉಡುಪಿ ತಂಡ​ದಿಂದ  ಮಾಯೊದ ಬೊಲ್ಲು ನಾಟಕ ಪ್ರದರ್ಶನ ಗೊಂಡಿತು.​ ​

 
 
 
 
 
 
 
 
 
 
 

Leave a Reply