“ಸ್ನೇಹಜೀವಿ” ಉಡುಪಿ  ಇದರ ಯಕ್ಷಗಾನ ಮತ್ತು ನಾಟಕ ರಂಗಭೂಮಿ ​ವತಿಯಿಂದ ​ವಿಶ್ವರಂಗಭೂಮಿ ದಿನಾಚರಣೆ.

ಸ್ನೇಹಜೀವಿ ಉಡುಪಿ ಇದರ ರಂಗ ಶಾಲೆಯ  ಯಕ್ಷಗಾನ ಮತ್ತು ನಾಟಕ ರಂಗಭೂಮಿ ವಿದ್ಯಾರ್ಥಿ​ಗಳಿಂದ ವಿಶ್ವ ರಂಗಭೂಮಿ ದಿನಾಚರಣೆಯ​ನ್ನು  ಕುರ್ಕಾಲು ಶ್ರೀ ಗಣಪತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ಆಚರಿಸಲಾಯಿತು. 
 
ಈ ಸಂದರ್ಭದಲ್ಲಿ ನಿವೃತ ಶಿಕ್ಷಕ, ಹಿರಿಯ ರಂಗಕರ್ಮಿ, ರೋ. ಶ್ರೀ. ಶ್ರೀನಿವಾಸ  ರಾವ್  ಕಾಪು ಇವರನ್ನು  ಸನ್ಮನಿಸಲಾಯಿತು.  ಇವರು ರಂಗ ಭೂಮಿಯ ಮಹತ್ವ, ಅವಶ್ಯಕತೆ, ಉಪಯುಕ್ತತೆ ಗಳ ಬಗ್ಗೆ ಮಾತನಾಡಿ  ಶುಭ ಹಾರೈಸಿದರು.​ ಕಲಾ ಪೋಷಕ ಚಂದ್ರಪ್ರಕಾಶ್  ಕಾಸರಗೋಡು ಇವರನ್ನು ಗೌರವಿಸಲಾಯಿತು.

ಯುನೈಟೆಡ್ ಕಿಂಗ್ಡಮ್ ರಂಗ ನಟಿ  ಹೆಲ್ಲನ್ ಮಿರ್ರೆನ್  ನೀಡಿದ  ವಿಶ್ವ ರಂಗ ಭೂಮಿ ದಿನದ 2021ರ ಸಂದೇಶವನ್ನು ಪ್ರಜ್ಞಾ ವಾಚಿಸಿದರು. ವಿದ್ಯಾರ್ಥಿ​ಗಳು ರಂಗಗೀತೆ ಹಾಡಿದರು.
ವೇದಿಕೆಯಲ್ಲಿ ಅತಿಥಿ​ಗಳಾಗಿ  ಆಲ್ವಿನ್ ಪ್ರಕಾಶ್ ಮಿನೇಜಸ್ ಶಂಕರಪುರ , ಕುರ್ಕಾಲ್  ಗಣಪತಿ ಶಾಲೆಯ  ಸ್ಥಾಪಕ ಮನೆತನದ ಸದಸ್ಯ ಧೀರಜ್ ಶೆಟ್ಟಿ,  ಶಂಕರಪುರ ಜೇಸಿಐ ಅಧ್ಯಕ್ಷೆ ಸಿಮಿ ಡಿಸೋಜ,  ಸಮಾಜ ಸೇವಕ ಶಶಿಧರ  ಪುರೋಹಿತ ಕಟಪಾಡಿ,  ತಂಡದ ವ್ಯವಸ್ಥಾಪಕ ಪ್ರಕಾಶ್ ಆಚಾರ್ಯ ಇನ್ನಂಜೆ​ ​,  ದಿನಕರ್  ​ಶೆಣೈ, ಪ್ರಕಾಶ್ ಆಳ್ವ, ಭರತ್ ಶೆಟ್ಟಿ ​ಕುರ್ಕಾಲ್,  ಲಕ್ಷ್ಮೀ, ಶಾಂತಿ,. ಗಣೇಶ್ ತಂತ್ರಿ  ಮೊದಲಾದವರು ಉಪಸ್ಥಿ​ತರಿದ್ದರು 
 
ಚೈತ್ರ  ನಿರೂಪಿಸಿದರು.​ ಕುಮಾರಿ ಸಂಗೀತ ಸ್ವಾಗತಿಸಿದರು.​ ಸಂದ್ಯಾ​ ​​ಪ್ರಸ್ತಾವನೆಗೈದರು, ತಂಡದ ಸಂಚಾಲಕ ಗಣೇಶ್ ರಾವ್ ಎಲ್ಲೂರು ಕಾರ್ಯಕ್ರಮ ಸಂಯೋಜಿಸಿ ಧನ್ಯವಾದ ಅರ್ಪಿಸಿದರು.​​
 
 
 
 
 
 
 
 
 
 
 

Leave a Reply