ಸಿಡಿ ಲೇಡಿಯ ಮನೇಲಿ ಬಾರಿ ಹಣ ಪತ್ತೆ

ಬೆಂಗಳೂರು : ಇತ್ತೀಚಿಗೆ ಬಾರಿ ಸದ್ದು ಮಾಡುತ್ತಿರುವ ಸಿಡಿ ಪ್ರರಕಣದಲ ಯುವತಿಯ ಮನೆಯಲ್ಲಿ 23 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.

ಎಸ್ ಐಟಿ ತಂಡ ಆರ್ ಟಿ ನಗರದಲ್ಲಿ ನಿನ್ನೆ ಯುವತಿ ಮನೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ 23 ಲಕ್ಷ ರೂ. ಹಣ ಪತ್ತೆಯಾಗಿದೆ. ಅದರೊಂದಿಗೆ ಅನೇಕ ಮಹತ್ತರ ದಾಖಲೆಗಳು ಪತ್ತೆಯಾಗಿದೆ ಎಂಬ ಮಾಹಿತಿ ದೊರೆತಿದೆ.

ಸಿಡಿ ಪ್ರಕರಣದ ಬೆನ್ನತ್ತಿರುವ ಎಸ್ ಐಟಿ ತಂಡ ನಾಲ್ಕು ತಂಡಗಳಾಗಿ ಆರೋಪಿಗಳಿಗಾಗಿ ಬಲೆ ಬೀಸಿದೆ. ಈ ಮಧ್ಯೆ ವಿಡಿಯೋ ರಿಲೀಸ್ ಮಾಡಿದ್ದ ಯುವತಿಗೆ ಕಳೆದ ವಾರವೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.ಆದರೆ ಇನ್ನು ಯುವತಿಯ ಜಾಡು ಪತ್ತೆಯಾಗಿಲ್ಲ. ಸಿಡಿಯಲ್ಲಿ ಇರುವ ಯುವತಿ ಈಗ ಎಲ್ಲಿದ್ದಾಳೆ ಎಂಬುದರ ಸದ್ಯ ಯಾವುದೇ ಮಾಹಿತಿಗಳಿಲ್ಲ.

 
 
 
 
 
 
 
 
 
 
 

Leave a Reply