ಶ್ರೀ ಕೃಷ್ಣಮಠದಲ್ಲಿ ಅಭೂತಪೂರ್ವ ಶತಕಂಠ ಗಾಯನ ಪ್ರಸ್ತುತಿ 

ಉಡುಪಿ, ಫೆ.11: ಪರ್ಯಾಯ ಶ್ರೀ ಪುತ್ತಿಗೆ ಮಠ, ಮಣಿಪಾಲದ ಸುಗುಣಶ್ರೀ ಭಜನ ಮಂಡಲಿ ಹಾಗೂ ಸರಳೇಬೆಟ್ಟು ರತ್ನ ಸಂಜೀವ ಕಲಾಮಂಡಲದ ಆಶ್ರಯದಲ್ಲಿ ಶ್ರೀ ಕೃಷ್ಣಮಠ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಸುಶ್ರೀ೦ದ್ರ  ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಶತಕಂಠ ಗಾಯನ ಕಾರ್ಯಕ್ರಮ ಎಲ್ಲ ಗಮನ ಸೆಳೆಯಿತು.
ಶತಕಂಠ ಗಾಯನ ಸಂಚಾಲಕಿ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ 600ಕ್ಕೂ ಅಧಿಕ ಗಾಯನ ಕಲಾವಿದರು ಪುರಂದರ ದಾಸರ ವಿವಿಧ ಹಾಡುಗಳನ್ನು ಪ್ರಸ್ತುತ ಪಡಿಸಿ ರಥಬೀದಿಯಲ್ಲೂ ಮೆರವಣಿಗೆ ನಡೆಸಿ ರಾಜಾಂಗಣಕ್ಕೆ ಬಂದು ಸೇರಿದರು.
ಕೊನೆಯಲ್ಲಿ ‘ಆನಂದ ಮುಕುಂದ ಅರವಿಂದ ನಯನ ಆನಂದತೀರ್ಥ ಪರಾನಂದ ವರದ’ ಹಾಡಿಗೆ ಮಹಿಳೆಯರೆಲ್ಲ ಸೇರಿ ಶ್ರೀಕೃಷ್ಣನಿಗೆ ನರ್ತನ ಸೇವೆ ಸಮರ್ಪಿಸಿದರು.
 
 
 
 
 
 
 
 
 
 
 

Leave a Reply