ಸರಕಾರಿ ನೌಕರಿಯಲ್ಲಿದ್ದ ಕಲಾವಿದರಿಗೆ ದೀಪಾವಳಿ ಹಬ್ಬ ಸಿಹಿಯಾಗಿರದು

ಸರಕಾರಿ ನೌಕರರು ಇನ್ನು ಮುಂದೆ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಿಲ್ಲ

ಮಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆ ನಿಯಮಗಳ 2020ರ ಕರಡು ಪ್ರತಿ ಪ್ರಕಟಿಸಿದ್ದು, ಇದರ ಅನ್ವಯ ಸರ್ಕಾರಿ ಸೇವೆಯಲ್ಲಿ ರುವವರು ಸಿನಿಮಾ, ಟಿವಿ ಕಾರ್ಯಕ್ರಮದಲ್ಲಿ ನಟಿಸಲು ನಿಷೇಧಿಸಲಾಗಿದೆ. ಸರ್ಕಾರಿ ನೌಕರರು ತಮಗೆ ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದ ಹೊರತು ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸುವಂತಿಲ್ಲ ಎಂದು ಹೇಳಲಾಗಿದೆ.

ಇದರೊಂದಿಗೆ ಸರ್ಕಾರಿ ನೌಕರರು ರೇಡಿಯೋ, ಪತ್ರಿಕೆ, ದೂರದರ್ಶನ ಅಥವಾ ಯಾವುದೇ ಪ್ರದರ್ಶನ ಕಲೆಗಳು, ಸಮೂಹ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುವುದು ಅಥವಾ ಪುಸ್ತಕಗಳನ್ನು ಬರೆಯುವುದು, ಲೇಖನಗಳು ಪ್ರಕಟಿಸುವುದು ಮತ್ತು ಸರ್ಕಾರಿ ಕೆಲಸದಲ್ಲಿರುವವರು, ಕುಟುಂಬದವರು ಯಾವುದೇ ಉಡುಗೊರೆ ಪಡೆಯಬಾರದು.

ಕೆಲಸದ ವೇಳೆ ಅದ್ದೂರಿ ಆತಿಥ್ಯವನ್ನು ಸ್ವೀಕರಿಸಬಾರದೆಂಬ ಹಲವು ನಿಯಮಗಳನ್ನು ಆದೇಶಿಸಿದೆ. ಆದರೆ, ಸಾಂದರ್ಭಿಕವಾಗಿ ಸಾಹಿತ್ಯ, ನಾಟಕ, ಪ್ರಬಂಧಗಳು, ಕವನ, ಸಣ್ಣ ಕಥೆಗಳು, ಕಾದಂಬರಿಗಳನ್ನು ಪೂರ್ವಾನುಮತಿ ಪಡೆಯದೆಯೇ ಬರೆಯಲು ಅವಕಾಶವಿರಲಿದೆ.

ಈ ಕರಡಿನ ಅಧಿಸೂಚನೆಯಲ್ಲಿ ಜನರು ತಮ್ಮ ಸಲಹೆಗಳನ್ನು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು ಸರ್ಕಾರ 15 ದಿನಗಳ ಕಾಲಾವ ಕಾಶ ನೀಡಿದೆ. ಜನರ ಸಲಹೆಗಳು ಬಂದ ನಂತರ ಅದನ್ನು ಪರಿಶೀಲಿಸಿ ಈ ನಿಯಮಗಳನ್ನು ಅಂತಿಮಗೊಳಿಸಲಾಗುವುದು‌.

 
 
 
 
 
 
 
 
 
 
 

Leave a Reply