ಗ್ರಾಮೀಣ ಪರಿಸರದಲ್ಲಿ ರಂಗ ಚಟುವಟಿಕೆ ಆರಂಭಿಸಿರುವುದು ಶ್ಲಾಘನೀಯ~ ರಂಗನಿರ್ದೇಶಕ ರವಿರಾಜ್ ಹೆಚ್ ಪಿ  

ಅತ್ಯಂತ ಆತಂಕದ ಈ ದಿನಗಳಲ್ಲಿ ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವ ಮೂಲಕ ನಾವು ಮತ್ತೆ ಉಲ್ಲಾಸದ ಕ್ಷಣಗಳನ್ನು ಬರ ಮಾಡಿಕೊಳ್ಳಬಹುದು ಎಂದು ಬೈಂದೂರಿನ ಸುರಭಿಯ ನಿರ್ದೇಶಕ, ರಂಗಕರ್ಮಿ ಸುಧಾಕರ್ ಬೈಂದೂರು ಹೇಳಿದರು.
ಅವರು ಕೊಕ್ಕರ್ಣೆ ಸಮೀಪದ ಬಲ್ಲೆಬೈಲಿನಲ್ಲಿ, ಡಿಸೆಂಬರ್ 25ರಂದು ಅರೆಹೊಳೆ ಪ್ರತಿಷ್ಠಾನ ಮತ್ತು ನಂದ ಗೋಕುಲ ಆಯೋಜಿಸಿದ್ದ ತ್ರಿದಿನ ರಂಗ ಶಿಬಿರ ಎನ್ ಸೆಂಬಲ್ ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡುತ್ತಿದ್ದರು. 
ಈ ದಿಸೆಯಲ್ಲಿ ಅರೆಹೊಳೆ ಪ್ರತಿಷ್ಠಾನದ ಒಂದು ದಶಕದ ಕೊಡುಗೆ ಗಮನಾರ್ಹ ಎಂದೂ ಅವರು ಹೇಳಿದರು. ಒಂದು ದಶಕದ ಕಾಲ ಸಾಂಸ್ಕೃತಿಕ ರಾಯಭಾರಿಯಂತೆ  ಮಂಗಳೂರಿನಲ್ಲಿ ಚಟುವಟಿಕೆಯಿಂದಿದ್ದ ಪ್ರತಿಷ್ಠಾನ ಈಗ ಬಲ್ಲೆಬೈಲು ಮೂಲಕ ಗ್ರಾಮೀಣ ಪರಿಸರದಲ್ಲಿ ರಂಗ ಚಟುವಟಿಕೆ ಆರಂಭಿಸಿರುವುದನ್ನು ಮತ್ತೋರ್ವ ಅತಿಥಿ ರಂಗನಿರ್ದೇಶಕ ರವಿರಾಜ್ ಹೆಚ್ ಪಿ ಶ್ಲಾಘಿಸಿದರು. 
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಶಾಂತ್ ಉದ್ಯಾವರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಕಾರಣವಾಗುವ ಇಂತ ಶಿಬಿರಗಳು ಇಂದಿನ ಅಗತ್ಯ ಎಂದರು. ಶ್ವೇತಾ ಅರೆಹೊಳೆ, ಗೀತಾ ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ, ವಿಶಾಲಾಕ್ಷಿ ರಾವ್ ವಂದಿಸಿದರು. 
ಕಾರ್ತಿಕ್ ಬ್ರಹ್ಮಾವರ ನಿರೂಪಿಸಿದರು. ನಂತರ ಶ್ವೇತಾ ಅರೆಹೊಳೆ ಮತ್ತು ತಂಡದಿಂದ ‘ನೃತ್ಯಾರಾಧನೆ’ ಹಾಗೂ ಶಿರಸಿಯ ಹನ್ನೆರಡು ವರ್ಷದ ಬಾಲ ಕಲಾವಿದೆ ತುಳಸಿ ಹೆಗಡೆಯಿಂ ವಂದೇ ಪರಮಾನಂದಮ್ ಎಂಬ ಯಕ್ಷಗಾನ ರೂಪಕ ಪ್ರದರ್ಶನಗೊಂಡಿತು.
 
 
 
 
 
 
 
 
 
 
 

Leave a Reply