‘ಮಲಬಾರ್ ವಿಶ್ವರಂಗ ಪುರಸ್ಕಾರ 2023

ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಇದೇ ಬರುವ ಮಾ. 26 ರ ಭಾನುವಾರ ಸಂಜೆ 4:00 ಕ್ಕೆ ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ‘ಮಲಬಾರ್ ವಿಶ್ವರಂಗ ಪುರಸ್ಕಾರ 2023 ‘ ಪ್ರದಾನ ಮಾಡಲಾಗುವುದು.

ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳಾದ ಮೂರ್ತಿ ದೇರಾಜೆ (ರಂಗ ನಿರ್ದೇಶಕರು), ಶೋಭಾ ವೆಂಕಟೇಶ್ , ಬೆಂಗಳೂರು (ಮಕ್ಕಳ ರಂಗಭೂಮಿ) , ಎಂ.ಎಸ್. ಭಟ್ ಉಡುಪಿ ( ರಂಗ ನಟ) , ಮೋಹನ್ ಮಾರ್ನಾಡ್ ಮುಂಬೈ (ರಂಗ ನಟ ಹೊರ ರಾಜ್ಯ), ಪ್ರಕಾಶ್ ನೊರೋನ್ಹ ಪಾಂಬೂರು (ರಂಗ ಸಂಘಟಕರು) ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ-2023’ ಪ್ರದಾನ ಮಾಡಲಾಗುವುದು.

ಸಮಾರಂಭದ ಸಭಾಧ್ಯಕ್ಷತೆಯನ್ನು ನಾಡಿನ ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯಾ ವಹಿಸಲಿದ್ದು ಮುಖ್ಯ ಅತಿಥಿ ಗಳಾಗಿ ಹಿರಿಯ ರಂಗಕರ್ಮಿ ಲಾವಣ್ಯ ಬೈಂದೂರಿನ ಗಣೇಶ್ ಕಾರಂತ್ ಹಾಗೂ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ತಲ್ಲೂರು ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿರುತ್ತಾರೆ.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಯುವ ಸಂಚಯದಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಭಾ ಕಾರ್ಯಕ್ರಮಕ್ಕಿಂತ ಮೊದಲು ನಡೆಯಲಿದೆ.

Leave a Reply