ಸಾಹಿತ್ಯ ನವ ನವೋನ್ಮೇಶ ಶಕ್ತಿ ಹೊಂದಿದೆ- ಎಸ್.ರಾಮ ಭಟ್.

ಸಾಹಿತ್ಯ ನವ ನವೊಮ್ಮೇಶ ಶಕ್ತಿ ಹೊಂದಿದೆ. ಉತ್ತಮ ಸಾಹಿತ್ಯವು ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ಸೃಷ್ಟಿ ಮಾಡುತ್ತದೆ ಎಂದು ಎಸ್. ವಿ. ಟಿ. ವಿದ್ಯಾಸಂಸ್ಥೆಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಎಸ್. ರಾಮ ಭಟ್ ಅವರು ಅಭಿಪ್ರಾಯಪಟ್ಟರು.
ಕಾರ್ಕಳದ ಶ್ರೀ ಭುವನೇಂದ್ರ ಪ್ರೌಢಶಾಲೆಯಲ್ಲಿ ಶಿಕ್ಷಕಿ ಸೀಮಾ ಆರ್ ಕಾಮತ್ ಅವರ ಚೊಚ್ಚಲ ಕೃತಿ “ಮತ್ತೆ ಹುಟ್ಟುವನು ನೇಸರ” ಕವನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಶುಭಾಶಂಸನೆ ಮಾಡಿ ಲೇಖಕಿಯರನ್ನು ಅಭಿನಂದನೆ ಮಾಡಿದರು.
ಲೇಖಕಿಯ ತಾಯಿ ಉಷಾ ಬಾಳಿಗಾ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಭುವನೇಂದ್ರ ಶಾಲೆಗಳ ಅಧ್ಯಕ್ಷ ವಾಮನ ಕಾಮತ್ ಅವರು ದೀಪ ಬೆಳಗಿಸಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಭುವನೇಂದ್ರ ಶಾಲೆಗಳ ಸಂಚಾಲಕರಾದ ಎಸ್. ನಿತ್ಯಾನಂದ ಪೈ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಂಶಪಾಲರಾದ ಮಿತ್ರಪ್ರಭಾ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕಾರ್ಕಳದ ಕ್ಷೇತ್ರ ಶಿಕ್ಷಣ ಅಧಿಕಾರಿ ಶಶಿಧರ ಜಿ. ಎಸ್, ನಿವೃತ್ತ ಅಧ್ಯಾಪಕಿ ಶೈಲಜಾ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದು ಶುಭ ಹಾರೈಕೆ ಮಾಡಿದರು. 
 
ವಿದ್ಯಾರ್ಥಿನಿ ವೈಷ್ಣವಿ ಕವನ ಸಂಕಲನದ ಕೆಲವು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಸೀಮಾ ಕಾಮತ್ ಈ ಕವನ ಸಂಕಲನ ಹೊರತರಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಭುವನೇಂದ್ರ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ಸ್ವಾಗತ ಮಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಧನ್ಯವಾದ ಅರ್ಪಿಸಿದರು. ರಾಜೇಂದ್ರ ಭಟ್ ಕೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.
 
 
 
 
 
 
 
 
 
 
 

Leave a Reply