ಆರ್‌ಎಸ್‌ಬಿ ಕೊಂಕಣಿ ಫಿಲ್ಮ್  “ಅಮ್ಚೆ ಸಂಸಾರ್” ಪೊಸ್ಟರ್, ಟ್ರೇಲರ್, ಧ್ವನಿ ಸುರುಳಿ ಬಿಡುಗಡೆ

ಶಿರ್ವ:-ಆರ್‌ಎಸ್‌ಬಿ ಸಮಾಜ ಕೃಷಿಪ್ರಧಾನ ಸಮಾಜವಾಗಿದ್ದು, ನಮ್ಮ ಹಿರಿಯರು ದೈವದೇವರ ಮೇಲೆ ಅಪಾರ ನಂಬಿಕೆ ಇರಿಸಿ ಶ್ರಮದಾಯಕ ಜೀವನ ನಡೆಸಿದವರು. ಸಂದೀಪ್ ಕಾಮತ್ ನಿರ್ದೇಶನದಲ್ಲಿ ಮಾತೃಭಾಷೆಯಲ್ಲಿ ಬಿಡುಗಡೆಗೊಳ್ಳಲಿರುವ “ಅಮ್ಚೆ ಸಂಸಾರ್” ಚಿತ್ರ ಕೂಡು ಕುಟುಂಬದ ಜೀವನ ಪದ್ಧತಿಯ ಮೇಲೆ ಬೆಳಕು ಚೆಲ್ಲಿದ ಪ್ರಥಮ ಚಲನಚಿತ್ರ ಎಂದು  ಮಣಿಪಾಲ ಆರ್‌ಎಸ್‌ಬಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮೋಹಿನಿ ಎನ್ ನಾಯಕ್ ನುಡಿದರು.
ಅವರು ಶುಕ್ರವಾರ ಮಣಿಪಾಲ ಆರ್‌ಎಸ್‌ಬಿ ಸಭಾಭವವನದಲ್ಲಿ ಬಹುಭಾಷಾ ಯುವಕಲಾವಿದ ಸಂದೀಪ್ ಕಾಮತ್ ಅಜೆಕಾರು ಇವರ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ “ಅಮ್ಚೆ ಸಂಸಾರ್” ಕೊಂಕಣಿ ಭಾಷಾ ಚಲನಚಿತ್ರದ  ಪೊಸ್ಟರ್,ಟ್ರೇಲರ್,ಧ್ವನಿ ಸುರುಳಿ ಬಿಡುಗಡೆ ಸಮಾ ರಂಭವನ್ನು ಜ್ಯೋತಿ ಪ್ರಜ್ವಲನದ ಮೂಲಕ ಉದ್ಘಾಟಿಸಿ ಮಾತನಾಡುತ್ತ, ಕೋವಿಡ್ ಬಿಡುವಿನಲ್ಲಿ ಚಿತ್ರೀಕರಣ ಪ್ರಾರಂಭಿಸಿ ಪೂರ್ಣಗೊಳಿಸಿದ “ಅಮ್ಚೆ ಸಂಸಾರ್” ತಂಡದ ಕಾರ್ಯವನ್ನು ಶ್ಲಾಘಿಸಿದರು.
ಚಿತ್ರದ ಪೋಸ್ಟರ್ ಬಿಡುಗಡೆಮಾಡಿದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ(ರಿ)ಬ೦ ಟಕಲ್ಲು -ಮಣಿಪಾಲ ಇದರ ಅಧ್ಯಕ್ಷ ಎಮ್.ಗೋಕುಲ್‌ದಾಸ್ ನಾಯಕ್ ಮಾತನಾಡಿ ಫಿಲ್ಮ್ ಮಾಡುವುದು ದೊಡ್ಡ ಸಾಧನೆಯಾಗಿದ್ದು, ಯಾವುದೇ ಹಣಕಾಸಿನ ಹಿನ್ನೆಲೆ ಇಲ್ಲದೆ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಸಂದೀಪ್ ಕಾಮತ್ ಬಳಗ ನಮ್ಮ ಸಮಾಜದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಇವರ ಕಾರ್ಯಕ್ಕೆ ನಮ್ಮ ಪೂರ್ಣ ಸಹಕಾರ ಇದೆ ಎಂದರು.
ಚಿತ್ರದ ಟ್ರೇಲರ್ ಬಿಡುಗಡೆಮಾಡಿದ ಮುಂಬಯಿಯ ಉದ್ಯಮಿ,ಆರ್‌ಎಸ್‌ಬಿ ವಿಂಡ್ಸರ್‌ನ ವಸಂತ ಆರ್ ನಾಯಕ್ ಮಾತನಾಡಿ, ಸಮಾಜದ ಉದಯೋನ್ಮುಖ ಕಲಾವಿದರಿಗೆ ಇದೊಂದು ವೇದಿಕೆ ಯಾಗಿದ್ದು ನಾವೆಲ್ಲರೂ ಬೆಂಬಲಿಸಬೇಕು. ಮುಂಬಯಿಯಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡುವುದಾಗಿ ತಿಳಿಸಿದರು.
ಧ್ವನಿಸುರುಳಿಯನ್ನು ಜಂಟಿಯಾಗಿ  ಬಿಡುಗಡೆ ಮಾಡಿದ ಕಾರ್ಕಳ ಹಿರ್ಗಾನ ಶ್ರೀಕ್ಷೇತ್ರ ಲಕ್ಶ್ಮೀಪುರದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ನಿವೃತ್ತ ಕಾರ್ಯಪಾಲ ಅಭಿಯಂತ ವಿಜಯಾನಂದ ನಾಯಕ್ ಶುಭ ಹಾರೈಸಿಯದರು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಗೀತಾಂಜಲಿ ಸಿಲ್ಕ್ ಹೌಸ್‌ನ ಮಾಲ್ಹಕ ರಾಮಕೃಷ್ಣ ನಾಯಕ್ ವಹಿಸಿ ಮಾತನಾಡುತ್ತಾ ಮಾತೃಭಾಷಾ ಚಲನಚಿತ್ರಕ್ಕೆ ಪೂರ್ಣ ಸಹಕಾರದ ಜೊತೆಗೆ ಸಾರಸ್ವತ ಸಮಾಜದ ಹಿನ್ನೆಲೆಯನ್ನು  ಆಧರಿಸಿ ಡಾಕ್ಯುಮೆಂಟರಿ ಚಿತ್ರ ತಯಾರಿಸಲು ಪ್ರಯತ್ನಿಸುವಂತೆ ಸಂದೀಪ್ ಕಾಮತ್‌ಗೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀಶ ನಾಯಕ್ ಪೆರ್ನಂಕಿಲ, ಜಿ.ಪಂ.ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್,ಬಂಟಕಲ್ಲು ದೇವಳದ ಅಡಳಿತ ಮೊಕ್ತೇಸರ ಶಶಿಧರ್ ವಾಗ್ಲೆ, ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್, ಆರ್‌ಎಸ್‌ಬಿ ಯುವವೃಂದ ಬಂಟಕಲ್ಲು ಇದರ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್, ಕಾರ್ಕಳ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾ ನಾಯಕ್, ಬಂಟಕಲ್ಲು ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ಆರ್.ಪಾಟ್ಕರ್, ಪೂರ್ಣೀಮಾ ಸುರೇಶ್, ಜಿಲ್ಲಾ ಹಿಂದುಳಿದ ವರ್ಗಗಳ ನಿವೃತ್ತ ಕಲ್ಯಾಣಾಧಿಕಾರಿ ದಯಾನಂದ ನಾಯಕ್,  
ಅಧೀಕ್ಷಕ ಅಧಿಕಾರಿ ಆರ್ಥಿಕ ವಲಯ ಮಂಗಳೂರು ದೇವದಾಸ್ ನಾಯಕ್, ಸಿಟಿಬಸ್ ಚಾಲಕ ಮಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉದ್ಯಮಿ ಸುವರ್ಧನ್ ನಾಯಕ್, ಶ್ರೀಕಾಂತ್ ನಾಯಕ್ ಅಲೆವೂರು, ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್ನ ರಾಘವೇಂದ್ರ ನಾಯಕ್ ಅಜೆಕಾರು ಸಮಾಜದ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಉದ್ಯಮಿಗಳು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ ನಿರ್ದೇಶಕ ಸಂದೀಪ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ ಅಕ್ಟೋಬರ್ ೨೪ರಂದು ಚಲನಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಪ್ರಕಟಿದರು. ಸಿನೇಮಾಟೋಗ್ರಾಫರ್ ಭುವನೇಶ್ ಪ್ರಭು ಸಹಕರಿಸಿದರು. ಬಿ.ಪುಂಡಲೀಕ ಮರಾಠೆ ನಿರೂಪಿಸಿದರು. ರವೀಂದ್ರ ಕಾಮತ್ ಸಣ್ಣಕ್ಕಿಬೆಟ್ಟು ಧನ್ಯವಾದವಿತ್ತರು.
 
 
 
 
 
 
 
 
 
 
 

Leave a Reply