” ಮಗಧದ ಮಾಣಿಕ್ಯ ” ~ ರಾರಾ.

ಮಗಧಕೆ ಮಂತ್ರಿಯು
ಚಾಣಕ್ಯ /
ಗುಡಿಸಲ ವಾಸದಿ
ಸಾರ್ಥಕ್ಯ//1//

ರಾಜನು ಕೊಟ್ಟನು
ಕಂಬಳಿಯ /
ಬಡವರ ಬದುಕಿಗೆ
ಉಂಬಳಿಯ //2//

ಕಂಬಳಿ ರಾಶಿಯು
ಗುಡಿಸಲಲಿ/
ಕಳ್ಳರು ಬಂದರು
ರಾತ್ರಿಯಲಿ //3//

ಶೀತದ ಗಾಳಿಯು
ರಭಸದಲಿ/
ಮಂತ್ರಿಯ ನಿದ್ದೆಯು
ಭೂಮಿಯಲಿ //4//

ಕಳ್ಳರ ಬೆರಗಿಗೆ
ಕೊನೆಯಿಲ್ಲ /
ಮಂತ್ರಿಯ ಕೇಳದೆ
ವಿಧಿಯಿಲ್ಲ //5//

ಕಂಬಳಿ ಸಾವಿರ
ಪಕ್ಕದಲಿ /
ನಿದ್ದೆಯು ಏತಕೆ
ನೆಲದಲ್ಲಿ !? //6//

ತುಸುನಗು ಮುಖದಲಿ
ಮೂಡಿತ್ತು /
ಮಂತ್ರಿಯ ಮಾತಲಿ
ಬಲವಿತ್ತು //7//

ಬಡವರ ಕಂಬಳಿ
ಎನಗಲ್ಲ /
ಅನ್ಯರ ದ್ರವ್ಯವ
ಬಯಸೊಲ್ಲ //8//

ಮಂತ್ರಿಯ ಮಾತಿಗೆ
ನಾಚಿದರು /
ಕಳ್ಳರು ಕಾಲಿಗೆ
ಎರಗಿದರು //9//

ದೇಶದ ಹಿತದಲೆ
ಬದುಕೆಲ್ಲ /
ಮಗಧದ ಮಂತ್ರಿಗೆ
ಎಣೆಯಿಲ್ಲ //10//

     

 
 
 
 
 
 
 
 
 
 
 

Leave a Reply