ರಂಗಭೂಮಿ (ರಿ.) ಉಡುಪಿ~ 42ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ – 2021

“ರಂಗಭೂಮಿ (ರಿ.) ಉಡುಪಿ” ದಿ| ಡಾ| ಟಿ.ಎಂ.ಎ. ಪೈ, ದಿ| ಮಲ್ಪೆ ಮಧ್ವರಾಜ್ ಮತ್ತು ದಿ| ಎಸ್.ಎಲ್. ನಾರಾಯಣ ಭಟ್ ಸ್ಮಾರಕ 42ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ – 2021

ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ “ರಂಗಭೂಮಿ (ರಿ.) ಉಡುಪಿ” ತನ್ನ 56ನೇ ವರ್ಷದಲ್ಲಿ, ಇದೇ ದಶಂಬರ್ ತಿಂಗಳ 3ನೇ ವಾರದಲ್ಲಿ ದಿ| ಡಾ| ಟಿ.ಎಂ.ಎ. ಪೈ, ದಿ| ಮಲ್ಪೆ ಮಧ್ವರಾಜ್ ಮತ್ತು ದಿ| ಎಸ್.ಎಲ್. ನಾರಾಯಣ ಭಟ್ ಸ್ಮಾರಕ ರಾಜ್ಯ ಮಟ್ಟದ 42ನೇ ಕನ್ನಡ ನಾಟಕ ಸ್ಪರ್ಧೆಯನ್ನು ಈ ಬಾರಿಯೂ ಕೋವಿಡ್-19 ಸಂಬ೦ಧಿಸಿದ ಸರಕಾರದ ಮಾರ್ಗ ಸೂಚಿಗೆ ಅನುಗುಣವಾಗಿ ನಡೆಸಲಿದೆ.

ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ 1 ಘಂಟೆ 30 ನಿಮಿಷ ಹಾಗೂ ಗರಿಷ್ಟ 2 ಘಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು.
ಕೊರೋನಾ ಸಮಸ್ಯೆಯಿಂದಾಗಿ ಈ ಬಾರಿ ಸ್ಪರ್ಧೆಗೆ ಗರಿಷ್ಠ 7ರಿಂದ 10 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳೊಂದಿಗೆ ಅನುಕ್ರಮವಾಗಿ ರೂ. 35,000/-, ರೂ.25,000/-, ರೂ.15,000/-ದ ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. 
ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲ ನಟನೆ/ ಹಾಸ್ಯ ಪಾತ್ರಗಳಿಗೂ ನಗದು ಸಹಿತ ಬಹುಮಾನ ನೀಡಲಾಗುವುದು. ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಒಟ್ಟು ದೂರಕ್ಕೆ ಕಿ.ಮಿ ಗೆ ರೂ. 10/- ರಂತೆ ಕನಿಷ್ಠ ರೂ. 1,500/-, ಗರಿಷ್ಠ ರೂ. 10,000/- ಪ್ರಯಾಣ ವೆಚ್ಚ ನೀಡಲಾಗುವುದು.

ತುಂಬಿದ ಪ್ರವೇಶ ಪತ್ರ ಸ್ವೀಕರಿಸಲು ನವಂಬರ್ 8 ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್‌ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, `ರಂಗ ಭೂಮಿ, ಕುತ್ಪಾಡಿ, ಉಡುಪಿ-574118 ಇವರಿಗೆ ಬರೆಯಬೇಕು. 

ಮೊಬೈಲ್ ಸಂಖ್ಯೆ : 9448952847 (ಪ್ರದೀಪ್‌ಚಂದ್ರ ಕುತ್ಪಾಡಿ) ಅಥವಾ ಉಪಾಧ್ಯಕ್ಷರು ಗಳಾದ ನಂದಕುಮಾರ್ ಎಂ. (9980524431) ಹಾಗೂ ಭಾಸ್ಕರ ರಾವ್ ಕಿದಿಯೂರು (9844742166) ಇವರನ್ನು ಸಂಪರ್ಕಿಸಬಹುದು. ಹಾಗೆಯೇ ಸ್ಪರ್ಧೆ ನಡೆಯುವ  ಸಮಯ ದಲ್ಲಿ ಸರಕಾರದ ಕೋವಿಡ್ 19ರ ಮಾರ್ಗಸೂಚಿ/ ನಿಬಂಧನೆ ಬದಲಾದಲ್ಲಿ ನಮ್ಮ ಸಂಸ್ಥೆಯು ಅದಕ್ಕೆ ಬದ್ಧವಾಗಿರುತ್ತದೆ ಎಂದು “ರಂಗಭೂಮಿ” ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply