ರಾಜಾಂಗಣದಲ್ಲಿ ರಾಷ್ಟ್ರಮಟ್ಟದ ಸಾಂಪ್ರದಾಯಿಕ ಕಲೆಗಳ ಕಾರ್ಯಾಗಾರ ಉದ್ಘಾಟನೆ

ಉಡುಪಿ: ಶ್ರೀಕೃಷ್ಣಮಠ ರಾಜಾಂಗಣದಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,15 ದಿನಗಳ ಪರ್ಯಂತ ನಡೆಯುವ “ಶ್ರೀರಾಮ ಹನುಮದುತ್ಸವ”ದಲ್ಲಿ,ವಿಶ್ವ ಕಲಾವಿದರ ದಿನಾಚರಣೆಯ ಅಂಗವಾಗಿ ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ರಾಷ್ಟ್ರಮಟ್ಟದ ಸಾಂಪ್ರದಾಯಿಕ ಕಲೆಗಳ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಇಂದಿನ ಉದ್ಘಾಟನೆ ವಿಶೇಷವಾಗಿತ್ತು, ಶ್ರೀಪಾದರು ಸ್ವತಃ ಚಿತ್ರವನ್ನು ಬಿಡಿಸುವ ಮೂಲಕ ಕಾರ್ಯಾಗಾರವನ್ನು ನಡೆಸಿದರು. 5 ರಾಜ್ಯಗಳ ರಾಷ್ಟ್ರಮಟ್ಟದ 9 ಕಲಾವಿದರು ಕಲಾಪ್ರದರ್ಶನದಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ “ಶ್ರೀರಾಮ ಹನುಮದುತ್ಸವ”ದಲ್ಲಿ ಪ್ರಾಯೋಜಕರಾದ ಕೆನರಾ ಬ್ಯಾಂಕಿನ ಉಡುಪಿ ವಲಯದ ಡಿಜಿಎಂ ಲೀನಾ ಪಿಂಟೋ, ಎಜಿಎಂ ವೈ ಹರೀಶ್, ರಥಬೀದಿ ಶಾಖೆಯ ಪ್ರಭಂದಕರಾದ ದಿನೇಶ್ ಹೆಗ್ಡೆ,ಕಲಾ ಸಂಘಟಕ ಪುರುಷೋತ್ತಮ ಅಡ್ವೆ,ಮಠದ ವ್ಯವಸ್ಥಾಪಕ ಗೋವಿಂದರಾಜ್,ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply