ಬ್ರಾಹ್ಮಣರ ಪ್ರತಿಭಟನೆಗೆ ಮಣಿದ ಪೊಗರು ಚಿತ್ರ ತಂಡ 

‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ತೋರಿಸಲಾಗಿದ್ದು, ಚಿತ್ರತಂಡ ಕ್ಷಮಾಪಣೆ ಕೇಳುವುದರ ಜತೆಗೆ ಅವಹೇಳನಕಾರಿಯಾಗಿ ಚಿತ್ರಿಸಿರುವ 14 ದೃಶ್ಯಗಳನ್ನು ಕತ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯರು ಆಗ್ರಹಿಸಿದ್ದು ಗೊತ್ತಿದೆ. 
ಈಗ ಆ ಆಕ್ಷೇಪಾರ್ಹ 14 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಿದ್ದು, ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಕಳಿಸಿಕೊಡಲಾಗಿದೆ. ಸೆನ್ಸಾರ್ ಮಂಡಳಿಯಿಂದ ಹೊಸ ಪ್ರಮಾಣಪತ್ರ ಸಿಗಲಿದ್ದು, ಎಡಿಟ್ ಆಗಿರುವ ಹೊಸ ಚಿತ್ರ ಶುಕ್ರವಾರದಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ.
 
 ಸಾ.ರಾ. ಗೋವಿಂದು ಸಹ ಮಾತನಾಡಿ ‘ಚಿತ್ರತಂಡದವರು ಆಕ್ಷೇಪಾರ್ಹ ದೃಶ್ಯಗಳನ್ನು ಕಟ್ ಮಾಡಿದ್ದು, ಚಿತ್ರ ಮತ್ತೆ ಹೊಸದಾಗಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಹಳೆಯ ವಿಷಯವನ್ನಿಟ್ಟು ಕೊಂಡು ಅಪಪ್ರಚಾರ ಮಾಡಿದರೆ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
 
 
 
 
 
 
 
 
 
 
 

Leave a Reply