Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಸುಗಮ  ಭಾವಗೀತೆ, ಹಾಗೂ ರಂಗಗೀತೆಗಳ ಕಾರ್ಯಾಗಾರ

ನೃತ್ಯನಿಕೇತನ ಕೊಡವೂರು ಹಾಗೂ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜನವರಿ,8,9,10 ಮೂರು ದಿವಸಗಳ ಸುಗಮ, ಭಾವಗೀತೆ, ಹಾಗೂ ರಂಗಗೀತೆಗಳ ಕಲಿಕಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. 
ಇದರ ಉದ್ಘಾಟನೆ ಜನವರಿ,8 ಸಂಜೆ 4 ಗಂಟೆಗೆ ಕುಂಜಿಬೆಟ್ಟಿನ ಸುಧೀಂದ್ರ ಮಂಟಪದಲ್ಲಿ ನಡೆಯಲಿದೆ.  ಉದ್ಘಾಟಕರಾಗಿ ಖ್ಯಾತ ರಂಗ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಗುರುರಾಜ ಮಾರ್ಪಳ್ಳಿ, ಅತಿಥಿಗಳಾಗಿ ಹಿರಿಯ ಉದ್ಯಮಿಗಳಾದ ವಿಶ್ವನಾಥ ಶೆಣೈ ಮತ್ತು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರು ಭಾಗವಹಿಸಲಿದ್ದಾರೆ. 
ಸಮಾರೋಪ ಸಮಾರಂಭ ಜನವರಿ 10 ಆದಿತ್ಯವಾರ ಸಂಜೆ 5-30 ರಿಂದ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ.  ಅತಿಥಿಗಳಾಗಿ ಶ್ರೀ ಜಯಕರಶೆಟ್ಟಿ ಇಂದ್ರಾಳಿ ಮತ್ತು ಖ್ಯಾತ ಸುಗಮ ಹಾಗೂ ಭಾವಗೀತೆಗಳ ಕಲಾವಿದ ರಾಘವೇಂದ್ರ ಆಚಾರ್ಯ ಮಣಿಪಾಲ ಭಾಗವಹಿಸಲಿದ್ದಾರೆ.  ಬಳಿಕ ಶಿಬಿರಾರ್ಥಿಗಳಿಂದ ಸಂಗೀತ ಕಾರ್ಯಕ್ರಮವೂ ನಡೆಯಲಿದೆ ಎಂದು ವಿದ್ವಾನ್ ಸುಧೀರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!