ಕವನ: ಬಿರು ಬೇಸಿಗೆ~ ಮಲ್ಲಿಕಾ ಶ್ರೀಶ ಬಲ್ಲಾಳ್

ಚಿನ್ನರಲೋಕಕೆ ಬೇಸಿಗೆಯ ರಜೆ.. ಸುಡು ಬಿಸಿಲ ಬೇಸಿಗೆಯ ಸಜೆಯಿಂದಾಗಿ ಮಾಡಲಾಗುತ್ತಿಲ್ಲ ಮಜೆ.

ನೈಸರ್ಗಿಕ ಹವಾ ನಿಯಂತ್ರಣಗಳು ಮಾನವನ ಆಸೆಗೆ ಬಲಿಯಾಗಿ ಹೋಗಿವೆ.
ಎತ್ತ ನೋಡಿದರೂ ಬರೀ ತಾಮುಂದು ನಾಮುಂದು ಎಂಬಂತೆ ಆಕಾಶದೆತ್ತರಕೆ ತಲೆಯೆತ್ತಿ ನಿಂತಿರುವ ಕಾಂಕ್ರೀಟ್ ಕಟ್ಟಡಗಳು.ಹಚ್ಛ ಹಸಿರಿನಿಂದ ಕಂಗೊಳಿಸುತ್ತಿದ್ದ ಹೊಲ ಗದ್ದೆಗಳು ಆಗಿವೆ ಬರಡು ನಿವೇಶನಗಳು..

  1.            ಕಾಣಸಿಗುತ್ತಿಲ್ಲ ಎಲ್ಲೂ ಗಿಡ,                  ಮರ, ಹಸಿರು ಬಳ್ಳಿ      ನಿರೀಕ್ಷಿಸುವುದಾದರೂ ಹೇಗೆ  ತಂಪಾದ ಸುಳಿಗಾಳಿ.

ಮನುಜನಾದರೋ ಬಿಸಿಲ ಬೇಗೆ ತಾಳಲಾರದೆ ಉಪಯೋಗಿಸುವನು ಕೃತಕ ಹವಾ ನಿಯಂತ್ರಣ ಸಾಧನ
ಪಾಪ ಮೂಕ ಪ್ರಾಣಿಗಳ ಜೀವ ಸಂಕಟವನ್ನು ಕೇಳುವವರಾರೋ ಹೇ ಧೀರಜ.

– ಮಲ್ಲಿಕಾ ಶ್ರೀಶ ಬಲ್ಲಾಳ್

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply