ಮಾಯಾಜಾಲ~- ಮಲ್ಲಿಕಾ ಶ್ರೀಶ ಬಲ್ಲಾಳ್

ಮಾಘಿಯ ಕಾಲದಲ್ಲಿನ

ಮಂಜಿನ ಕಲೆ ಎಂದು ತಿಳಿದು ಸ್ಪರ್ಶಾನಂದ ಪಡೆಯ

ಹೊರಟಾಗ ತಿಳಿಯಿತು

ಇದು ಮಂಜಿನ ಕಲೆಯಲ್ಲ

ಪ್ರಕೃತಿಯ ಮಾಯಾಜಾಲವೆಂದು

ಈ ಮಾಯಾಜಾಲದಲ್ಲಿನ

ಮಂಜಿನ ಮೆರವಣಿಗೆಯನ್ನು

ನೋಡುವುದೇ ಸೊಗಸು

ನಯನಗಳಿಗೆ ತಂಪು- ತಂಪು

ಜೀವನವೆಂಬ ನಾಟಕ ರಂಗದಲ್ಲೂ

ಮನುಜ ಹೆಣ್ಣು, ಹೊನ್ನು, ಮಣ್ಣೆಂಬ

ಮೋಹದ ಮಂಜಿನ ಸ್ಪರ್ಶಾನಂದ

ಪಡೆಯ ಹೊರಟಾಗ

ಕೊನೆಯಲ್ಲಿ ತಿಳಿಯುತ್ತದೆ

ಜೀವನವೆಂಬುದು

ಬರೀ ಮಂಜಿನ ಕಲೆಯಲ್ಲ

ವಿಧಿಯ ಮಾಯಾಜಾಲವೆಂದು…

 
 
 
 
 
 
 
 
 
 
 

Leave a Reply