ಮಲಬಾರ್ ಗೋಲ್ಡ್ & ಡೈಮಂಡ್ ನಲ್ಲಿ ಎಸ್ಪಿಬಿ ನೆನಪಲಿ ಗೀತಾ ಗಾಯನ 

ಉಡುಪಿ: ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಮತ್ತು ಕಟಪಾಡಿ ದಿಶಾ ಕಮ್ಯೂನಿಕೇಷನ್ಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಗಾನಗಂಧರ್ವ ನೆನಪಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉಡುಪಿಯ ಮಲಬಾರ್ ಗೋಲ್ಡ್ ಶೋರೂಮ್ ನಲ್ಲಿ ಭಾನುವಾರ ನ.1 ರಂದುನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಉಸಿರು ನಿಂತರೂ ಜಗತ್ತಿನಾದ್ಯಂತ ತನ್ನ ಹಾಡುಗಳ ಮೂಲಕ ಎಸ್ ಪಿ ಬಿ ಅಮರರಾಗಿದ್ದಾರೆ ಎಂದು ಹೇಳಿದರು. ಹಾಗೆ ಅವರ ನೆನಪಿನಲ್ಲಿ ಉಡುಪಿಯಲ್ಲಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ನಿಜಕ್ಕೂ ಪ್ರಸ್ತುತ. ಈ ಕಾರ್ಯಕ್ರಮ ಪ್ರತೀ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ನಿರಂತರವಾಗಿ ಅದ್ದೂರಿಯಾಗಿ ನಡೆಯುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ವ್ಯವಸ್ಥಾಪಕ ಹಫೀಜ್ ರೆಹಮಾನ್ ಮಾತನಾಡಿ, ಮಲಬಾರ್ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯಂದು ಕನ್ನಡ ರಾಜ್ಯೋತ್ಸವವನ್ನು ಎಸ್ಪಿಬಿ ನೆನಪಿನಲ್ಲಿ ಆಚರಿಸುತ್ತಿದ್ದೇವೆ. ಅಂತೆಯೇ ಈ ಕಾರ್ಯಕ್ರಮವನ್ನು ಪ್ರತೀ ವರ್ಷ ನಡೆಸುವ ಆಲೋಚನೆಯಿದೆ ಎಂದರು.

ಅನಂತರ ಯುವ ಪ್ರತಿಭಾನ್ವಿತ ಕಲಾವಿದರಾದ ಪ್ರಕಾಶ ಸುವರ್ಣ ಕಟಪಾಡಿ, ರೋಹಿತ್ ಕುಮಾರ್ ಮಲ್ಪೆ, ಎ.ಶಂಕರ್ ಸಾಲ್ಯಾನ್ ಅಂಬಲಪಾಡಿ, ದಯಾನಂದ ಡಿ. ಉಡುಪಿ, ನಾರಾಯಣಮೂರ್ತಿ ಲಕ್ಷ್ಮೀನಗರ, ಸವಿತ ಲಕ್ಷ್ಮೀನಗರ, ಸಚಿನ್ ಸಾಲ್ಯಾನ್ ಮಲ್ಪೆ, ಸುಷ್ಮೀತಾ ಎರ್ಮಾಳ್,ಶಗುನ್ ಶೆಟ್ಟಿ ಕಿನ್ನಿಮೂಲ್ಕಿ, ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ, ಕುಮಾರಿ ವೈಷ್ಣವಿ ಜೋಗಿ ಉಡುಪಿ, ಕುಮಾರಿ ನಂದಿನಿ ಉಡುಪಿ ಅವರು ಎಸ್ಪಿಬಿ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.

ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ಮಾರ್ಕೆಟಿಂಗ್ ಹೆಡ್ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು. ಉಪನ್ಯಾಸಕ ದಯಾನಂದ ಡಿ ಸ್ವಾಗತಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply