Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಐದು ಮೇಳಗಳ ಪ್ರಥಮ ದೇವರ ಸೇವೆ ಆಟಕ್ಕೆ ಚಾಲನೆ

ಮಂದಾರ್ತಿ : ಶ್ರ‍್ರೀಕ್ಷೇತ್ರ ಮಂದಾರ್ತಿಯಲ್ಲಿ ಐದು ಮೇಳಗಳ ಪ್ರಥಮ ದೇವರ ಸೇವೆ ಆಟಕ್ಕೆ ಚಾಲನೆಯನ್ನು ನೀಡಲಾಯಿತು.

ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕ ಎಂ.ಶ್ರೀಪತಿ ಅಡಿಗ ನೆರವೇರಿಸಿದರು. ಭಾನುವಾರ ಬೆಳಿಗ್ಗೆ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಹೋಮ,ಮಧ್ಯಾಹ್ನ ಶ್ರೀಕ್ಷೇತ್ರದಲ್ಲಿ ಐದು ಮೇಳಗಳ ಶ್ರೀ ಮಹಾಗಣಪತಿ ಪೂಜೆ,ರಾತ್ರಿ ಪ್ರಥಮ ದೇವರ ಸೇವೆ ಆಟ ಜರುಗಿತು.

ಈ ಸಂಧರ್ಭದಲ್ಲಿ ಮೇಳಕ್ಕೆ ಬೆಳ್ಳಿಯ ಕಿರೀಟವನ್ನು ಉಷಾ ಮಲ್ಲಿಕಾರ್ಜುನ ಪುರಾಣಿಕ ದಂಪತಿ ಕುಂದಾಪುರ ಮತ್ತು ಸಹನಾ ಗಿರೀಶ್ ಜೋಗಿ ಬೈಂದೂರು (ಹಳಗೇರಿ ಬೆಂಗಳೂರು)ಮೇಳಕ್ಕೆ ಹಸ್ತಾಂತರಿಸಿದರು.ಮೇಳಕ್ಕೆ ಬೆಳ್ಳಿ ಕಿರೀಟ ನೀಡಿದ ದಾನಿಗಳನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ, ಅನುವಂಶಿಕ ಮೊಕ್ತೇಸರರುಗಳಾದ ಹೆಚ್.ಧನಂಜಯ ಶೆಟ್ಟಿ, ಎಚ್.ಸುರೇಂದ್ರ ಶೆಟ್ಟಿ,ಎಚ್.ಪ್ರಭಾಕರ ಶೆಟ್ಟಿ,ಎಚ್.ಶಂಭು ಶೆಟ್ಟಿ,ಆರ್.ಶ್ರೀನಿವಾಸ ಶೆಟ್ಟಿ,ಉದ್ಯಮಿ ಶೇಡಿಕೊಡ್ಲು ವಿಠಲ ಶೆಟ್ಟಿ,ಹೆಗ್ಗುಂಜೆ ನಾಲ್ಕು ಮನೆಯವರು, ಊರ ಸಮಸ್ತರು ಹಾಗೂ ಶ್ರೀ ದೇವಳದ ಸಿಬ್ಬಂದಿ ವರ್ಗ, ಅರ್ಚಕ ವೃಂದ,ಮೇಳದ ಕಲಾವಿದರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!