5ನೇ ದಿನಕ್ಕೆ “ದಿ ಕಾಶ್ಮೀರ್ ಫೈಲ್ಸ್” ಕಲೆಕ್ಷನ್ ಎಷ್ಟು ಗೊತ್ತಾ.. ?

ಫಿಲ್ಮಿ ಡೆಸ್ಕ್- ಕಾಶ್ಮೀರಿ ಪಂಡಿತರ ಮಾರಣ ಹೋಮವನ್ನು ಕಥಾವಸ್ತುವಾಗಿ ಇಟ್ಟುಕೊಂಡು ಮೂಡಿ ಬಂದಿರುವ ದಿ ಕಾಶ್ಮೀರ್ ಫೈಲ್ಸ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್.

ದಿ ಕಾಶ್ಮೀರ್ ಪೈಲ್ಸ್ ರಿಲೀಸ್ ಆದ ಐದು ದಿನದಲ್ಲಿ ಪ್ರತಿದಿನದ ಕಲೆಕ್ಷನ್ ವಿಚಾರವನ್ನು ಬಾಲಿವುಡ್ ನ ಖ್ಯಾತ ಟ್ರೇಡ್ ಅನಾಲಿಸಿಸ್ಟ್ ಟ್ವೀಟ್ ಮಾಡಿ ವಿಚಾರ ತಿಳಿಸಿದೆ.

ಮೊದಲ ದಿನ 3.55 ಕೋಟಿ
ಎರಡನೇ ದಿನ 8.50 ಕೋಟಿ
ಮೂರನೇ  ದಿನ 15.10 ಕೋಟಿ
ನಾಲ್ಕನೇ  ದಿನ 15.06 ಕೋಟಿ
ಐದನೇ ದಿನ 18  ಕೋಟಿ ರೂಪಾಯಿ

ಈ ಮೂಲಕ ಗಲ್ಲಾ ಪಟ್ಟಿಗೆ ತುಂಬುತ್ತಿರುವ ದಿ ಕಾಶ್ಮೀರ್ ಫೈಲ್ ಗೆ ಹೌಸ್ ಫುಲ್ ರಿಯಾಕ್ಷನ್ ಸಿಕ್ಕಿದೆ. ಒಟ್ಟಾರೆ ಐದು ದಿನದ ಗಳಿಕೆ ಸುಮಾರು 60 ಕೋಟಿ ರೂಪಾಯಿಯಾಗಿದೆ. ಕೆಲವೇ ದಿನದಲ್ಲಿ ನೂರು ಕೋಟಿ ಕ್ಲಬ್ ಗೆ ಈ ಸಿನಿಮಾ ಸೇರ್ಪಡೆಯಾಗಲಿದೆ.

ದೇಶಾದ್ಯಾಂತ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕುತೂಹಲ ಭರಿತರಾದ ಜನರು ದಿ ಕಾಶ್ಮೀರ್ ಫೈಲ್ಸ್ ನೋಡಲು ಮುಗಿ ಬೀಳುತ್ತಿದ್ದಾರೆ. ಇದೇ ವೇಳೆ ಅಸ್ಲಾಂನಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆಗಾಗಿ ಅಲ್ಲಿನ ಸರ್ಕಾರ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿದೆ.

ಸ್ಯಾಂಡಲ್ ವುಡ್ ನಟ ಪ್ರಕಾಶ್ ಬೆಳವಾಡಿ, ಮೂಲತಃ ಕಾಶ್ಮೀರ ಪಂಡಿತರಾಗಿರುವ ಅನುಪಮ್ ಖೇರ್ ಸೇರಿದಂತೆ ಹಲವು ನಟರ ಅಭಿನಯ ನೈಜವಾಗಿದ್ದು, ಪ್ರೇಕ್ಷಕರನ್ನು ಕೈ ಬೀಸಿ ಕರೆಯುತ್ತಿದೆ. 

 

Leave a Reply