ಬೈಲೂರಿನಲ್ಲಿ ನಡೆಯಲಿರುವ ಕಾರ್ಕಳ ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮನೋಹರ ಪ್ರಸಾದ್

ಕಾರ್ಕಳ ತಾಲೂಕು ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇಲ್ಲಿನ ಹಾಲ್ದಿನ್ ಗ್ಲಾಸ್ ಸಭಾಂಗಣದಲ್ಲಿ ಇದೇ ಬರುವ ಜನವರಿ 30 ರಂದು ನಡೆಯಲಿದೆ.  ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಹಿರಿಯ ಪತ್ರಕರ್ತ, ಬರಹಗಾರ ಹಾಗೂ ಖ್ಯಾತ ವಾಗ್ಮಿ  ಮನೋಹರ ಪ್ರಸಾದ್ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಇವರ ಆಯ್ಕೆಯನ್ನು ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧಿಕೃತವಾಗಿ ಘೋಷಣೆ ಮಾಡಿದರು.
 ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷರಾಗಿ ಮಾನ್ಯ ಶಾಸಕ ವಿ. ಸುನಿಲ್ ಕುಮಾರ್, ಡಾ|| ಜೆ. ದಿನೇಶ್ಚಂದ್ರ ಹೆಗ್ಡೆ, ಕಾರ್ಯಾಧ್ಯಕ್ಷರಾಗಿ  ನಿವೃತ್ತ ಶಿಕ್ಷಕ  ಕೆ .ಮಂಜುನಾಥ ಶೆಟ್ಟಿ, ಕಾರ್ಯದರ್ಶಿಗಳಾಗಿ ಶಾಂತಿನಾಥ ಜೋಗಿ, ಹರೀಶ್ ಶೆಟ್ಟಿ  ಸಹಶಿಕ್ಷಕರು ಜೊತೆ ಕಾರ್ಯದರ್ಶಿಯಾಗಿ  ನರಸಿಂಹವರ್ಧನ್ ಸಿ ಎಸ್ , ಕೋಶಾಧಿಕಾರಿಯಾಗಿ  ಪ್ರಮೋದ್ ನಾಯಕ್, ಸಮ್ಮೇಳನ ಸಮಿತಿಯ ಉಪಾಧ್ಯಕ್ಷರಾಗಿ ಕೆ.ಅನಂತ ಪಟ್ಟಾಭಿರಾವ್, ಕಮಲಾಕ್ಷ ನಾಯಕ್, ವಿಷ್ಣು ಗೌಡ,  ಸಚ್ಚಿದಾನಂದ ಶೆಟ್ಟಿ, ನಿರ್ಮಲ ಇವರುಗಳನ್ನು  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
 ಬೈಲೂರಿನಲ್ಲಿ ನಡೆದ  ಪದಾಧಿಕಾರಿಗಳ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಕಳ ವಲಯದ  ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ.ಎಸ್. ಶಶಿಧರ್ , ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಸಂತೋಷ ವಾಗ್ಲೆ, ಪ್ರಾಚಾರ್ಯ ಶ್ರೀ ಗುರುಮೂರ್ತಿ ಎನ್ ಟಿ,   ಮಾಲಿನಿ ಜೆ. ಶೆಟ್ಟಿ ,ತಾ.ಪಂ ಸದಸ್ಯರು,  ಕಸಾಪ ಬೈಲೂರು ಹೋಬಳಿ ಅಧ್ಯಕ್ಷ ದಿನೇಶ್ ಶೆಟ್ಟಿ, ಕಸಾಪ ಕಾರ್ಕಳ ತಾಲೂಕಿನ ಸಂಘಟನಾ ಕಾರ್ಯದರ್ಶಿಗಳಾದ ದೇವದಾಸ್ ಕೆರೆಮನೆ ಮತ್ತು  ಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಹಾಗೂ ಶಿಕ್ಷಕ ರಾಜೇಂದ್ರ ಭಟ್ ನಿರೂಪಿಸಿ ಸ್ವಾಗತಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ನಾಗರಾಜ್ ವಂದಿಸಿದರು.
 
 
 
 
 
 
 
 
 
 
 

Leave a Reply