ಕಾಂತಾರ ಚಿತ್ರಕ್ಕೆ ಆಸ್ಕರ್‌ ದೊರಕಲಿದೆಯೇ ..?

ದಿನ ಇರೋ ಬರೋ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿರುವ ‘ಕಾಂತಾರ’ ಇನ್ನೊಂದು ಬೃಹತ್ ಹೆಜ್ಜೆ ಇಟ್ಟಿದೆ. ವಿಶ್ವದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಎಂದು ಪರಿಗಣನೆ ಆಗಿರುವ ಆಸ್ಕರ್ ಪ್ರಶಸ್ತಿಯ ಅಂಗಳಕ್ಕೆ ಕಾಲಿಟ್ಟಿದೆ.

2023ರಲ್ಲಿ ಕೊಡಲಾಗುವ ಆಸ್ಕರ್‌ಗೆ ಮೊದಲ ಹಂತವಾಗಿ ತಂಡ ವಿಶ್ವದ ಅತ್ಯುತ್ತಮ ಚಿತ್ರಗಳನ್ನು ಲೆಕ್ಕ ಹಾಕಿ ಅಪ್ಲಿಕೇಶನ್ ಹಾಕಲು ಸೂಚಿಸುತ್ತದೆ. ಮೊದಲ ಹೆಜ್ಜೆ ಇದು. ಆ ಮೊದಲ ಹೆಜ್ಜೆಯಲ್ಲಿ ಪಾಸ್ ಆದ ‘ಕಾಂತಾರ ‘ ಆಸ್ಕರ್ ಅಂಗಳ ಸೇರಿದೆ. 

ಮುಂದಿನ ಹೆಜ್ಜೆ ಶಾರ್ಟ್ ಲಿಸ್ಟ್ ಸೇರುವುದು. ಅಂದಹಾಗೆ ಈಗಾಗಲೇ ತೆಲುಗಿನಲ್ಲಿ ರಾಜಮೌಳಿ ಚಿತ್ರ ‘RRR’ ಶಾರ್ಟ್ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. “ನಾಟು ನಾಟು” ಹಾಡು ಆಸ್ಕರ್ ಅಂಗಳದಲ್ಲಿ ಕುಣಿಯುತ್ತಿದೆ.

ಮುಂದಿನ ಹಂತ ನಾಮಿನೇಷನ್ ಆಗುವುದು. ಇದೀಗ ಕನ್ನಡದ ಕಾಂತಾರ ಮೊದಲ ಹೆಜ್ಜೆ ಇಟ್ಟಿದ್ದನ್ನು ಕಾಂತಾರ ತಂಡ ಒಪ್ಪಿಕೊಂಡಿದೆ. ಇನ್ನು ಮುಂದಿನ ಹೆಜ್ಜೆ ಶಾರ್ಟ್ ಲಿಸ್ಟ್ ಸೇರುವುದು.

ಇನ್ನು ಆಸ್ಕರ್‌ಗೆ ನಾಮಿನೇಟ್ ಆಗುವುದೇ ದೊಡ್ಡ ಗಳಿಕೆ. ಹೀಗಿರುವಾಗ ಕಾಂತಾರ ಏನಾದ್ರೂ ಆಸ್ಕರ್ ಪ್ರಶಸ್ತಿ ಧಕ್ಕಿಸಿಕೊಂಡರೆ ಅದಕ್ಕಿಂತ ಹೆಮ್ಮೆ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಇರೋದಿಲ್ಲ. 

ಏನೇ ಆದ್ರೂ ಆಸ್ಕರ್ ಅಂಗಳವನ್ನ ಮುಟ್ಟುವುದೇ ದೊಡ್ಡ ವಿಚಾರ. ಅಂಥದ್ರಲ್ಲಿ ಕನ್ನಡದಲ್ಲಿ ‘ಕಾಂತಾರ’ ಈ ಸಾಧನೆ ಮಾಡಿದೆ. ಇದು ಅಭಿನಂದನೀಯ. 

 
 
 
 
 
 
 
 
 
 
 

Leave a Reply