ಅಗಲಿದ ಕಲಾವಿದರಿಗೆ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನರಾದ ಶತಾಯುಷಿ ಹಿರಿಯಡಕ ಗೋಪಾಲ ರಾವ್ ಮತ್ತು ಹಿರಿಯ ಕಲಾವಿದ ಲಕ್ಷ್ಮಣ್ ಕಾಂಚನ್ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಅಕ್ಟೋಬರ್ 20, 2020ರಂದು ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಜರಗಿತು. ಯಕ್ಷಗಾನ ಕಲಾರಂಗ ಉಡುಪಿ ಮತ್ತು ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿ ಜಂಟಿಯಾಗಿ ಈ ಸಭೆ ಆಯೋಜಿಸಿದ್ದವು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಮತ್ತು ಎರಡು ಸಂಸ್ಥೆಗಳ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಕಲಾರಂಗದ ಉಪಾಧ್ಯಕ್ಷ ಎಸ್. ವಿ ಭಟ್, ಪ್ರೊ. ಎಂ.ಎಲ್ ಸಾಮಗ, ವಿಜಯ್ ಕುಮಾರ್ ಮುದ್ರಾಡಿ, ಕೆ. ಅಜಿತ್ ಕುಮಾರ್, ಮರವಂತೆ ಪ್ರಕಾಶ್ ಪಡಿಯಾರ್, ರಾಮಾಂಜಿ ನುಡಿನಮನ ಸಲ್ಲಿಸಿದರು. ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ ಅಧ್ಯಕ್ಷ ಹಾಗೂ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಕಲಾ ಮಂಡಳಿಯ ಬೆಳವಣಿಗೆಯಲ್ಲಿ ಹಿರಿಯಡಕ ಗೋಪಾಲ ರಾಯರ ಕೊಡುಗೆ ಹಾಗೂ ಸಂಸ್ಥೆ ಅವರನ್ನು ಗೌರವಿಸಿದ್ದನ್ನು ಸ್ಮರಿಸಿಕೊಂಡರು.
ಈರ್ವರು ಕಲಾವಿದರಿಗೂ ಸಂಸ್ಥೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿದ್ದನ್ನು ನೆನಪಿಸಿಕೊಂಡರು. ಅಂಬಲಪಾಡಿ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕೆ.ಜೆ ಕೃಷ್ಣ ವಂದಿಸಿದರು. ಸಭೆಯ ಆರಂಭದಲ್ಲಿ ಕೆ.ಜೆ ಗಣೇಶ ಮತ್ತು ಅನಂತ ಪದ್ಮನಾಭ ಭಟ್ ಯಕ್ಷಗಾನ ಹಾಡಿನ ಮೂಲಕ ಅಗಲಿದ ಚೇತನಗಳಿಗೆ ಗಾನ ನಮನ ಸಲ್ಲಿಸಿದರು. ಕೆ.ಜೆ ಸುಧೀಂದ್ರ ಮದ್ದಲೆವಾದನದಲ್ಲಿ ಸಹಕರಿಸಿದರು.
 
 
 
 
 
 
 
 
 
 
 

Leave a Reply