ಸಂಪ್ರೀತ್ ಆಚಾರ್ಯನ ಶ್ರೀಕೃಷ್ಣಾಷ್ಟಮಿ ಸ್ಪೆಶಲ್ ” ಜಟಾಯು”

ನಿಟ್ಟೂರು ಹೈಸ್ಕೂಲ್ ನ 10ನೇ ತರಗತಿಯ ವಿದ್ಯಾರ್ಥಿ ಸಂಪ್ರೀತ್ ಏನಾದರೊಂದು ಹೊಸ ಹೊಸ ಅನ್ವೇಷಣೆಯಲ್ಲಿ ಸದಾ ತನ್ನನ್ನು ತೊಡಗಿಸಿಕೊಳ್ಳುತ್ತಿರುತ್ತಾನೆ. ಪ್ರತಿವರ್ಷ ಹೊಸತನಕ್ಕೆ ನಾಂದಿ ಯಾಗುವ ಈತ ಈ ಬಾರಿ ಅಷ್ಟಮಿಯ ಪರ್ವಕಾಲದಲ್ಲಿ ಜಟಾಯು ವೇಷಧಾರಿಯಾಗಿ ಮಿಂಚಿದ್ದಾನೆ. 
ಜಟಾಯು ವೇಷ ಭೂಷಣವನ್ನು ತಾನೇ ಎರಡು ದಿನದಲ್ಲಿ ಹೊಲಿದುಕೊಂಡಿದ್ದಾನೆ. ಫೋಮ್ ನಲ್ಲಿ ತನಗೆ ಬೇಕಾದ ರೀತಿಯಲ್ಲಿ ವೇಷವನ್ನು ರಚನೆ ಮಾಡಿ, ಬಣ್ಣಗಳನ್ನು ಹಾಕಿ ಜಟಾಯುವಿನಂತೆ ಕಾಣಿಸಿಕೊಂಡಿದ್ದಾನೆ. ತಲೆಗೆ ಹೆಲ್ಮಟ್ ಹಾಕಿ ಅದರ ಮೇಲೆ ಕ್ರಾಫ್ಟ್ ವರ್ಕ್ ಮಾಡಿದ್ದಾನೆ. 
ಕಕ್ಕುಂಜೆ ನಾಗಾನಂದ, ಸುಮನಾ ಆಚಾರ್ಯ ದಂಪತಿಗಳ ಪುತ್ರನಾಗಿರುವ ಸಂಪ್ರೀತ್ ಓದಿನೊಂದಿಗೆ ಇಂತಹ ಕಲಾ ಪ್ರೌಢಿಮೆಯನ್ನು  ಬೆಳೆಸಿಕೊಂಡು ಸದ್ದಿಲ್ಲದೇ ತನ್ನಷ್ಟಕ್ಕೆ ಬ್ಯುಸಿಯಾಗಿರುತ್ತಾನೆ.     
 
 
 
 
 
 
 
 
 
 
 

Leave a Reply