ಮನೆಯಂಗಳದಲ್ಲಿ ಸೋಬಾನೆ ಹಬ್ಬ”

ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಮಿತ್ರ ಸಂಗಮ ಬಿಜಾಡಿ ಮತ್ತು ರೋಟರಿ ಸಮುದಾಯ ದಳ ಬಿಜಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರದಂದು ಬಿಜಾಡಿ ದಿ. ನಾಗೇಶ್ವರ ಬಾಯರಿ ಅವರ ಮನೆ ಅಂಗಳದಲ್ಲಿ “ಮನೆಯಂಗಳದಲ್ಲಿ ಸೋಬಾನೆ ಹಬ್ಬ” ಕಾರ್ಯಕ್ರಮ ಜರುಗಿತು.

ಉದ್ಘಾಟನೆಯನ್ನು ಕನ್ನಡ ಜಾನಪದ ಪರಿಷತ್ತಿನ ವಿಭಾಗೀಯ ಸಂಚಾಲಕಿ, ಖ್ಯಾತ ರಂಗೋಲಿ ಕಲಾವಿದೆ ಡಾ.ಭಾರತಿ ಮರವಂತೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀ ಬಿ ವಾದಿರಾಜ್ ಹೆಬ್ಬಾರ್ ಅವರು ವಹಿಸಿದ್ದರು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ಗಣೇಶ್ ಗಂಗೊಳ್ಳಿ ಪ್ರಾಸ್ತಾಪಿಸಿದರು, ನಾಗ ಪಾತ್ರಿ ಶಂಕರನಾರಾಯಣ ಬಾಯರಿ ಶುಭ ಸಂದೇಶ ನೀಡಿದರು.

ಕುಮಾರಿ ಪ್ರೀತಿ ಗೋಪಾಡಿ ಜಾನಪದ ಸಾಹಿತ್ಯದಲ್ಲಿ ಮಹಿಳೆ ಎಂಬ ವಿಷಯದ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ಸೋಬಾನೆ ಹಾಡುಗಾರರಾದ ಸೀತು ತಲ್ಲೂರು, ಶಾರದಾ ಗಾಣಿಗ ಬಿಜಾಡಿ, ದುರ್ಗಿ ಕಂಬಳ ಗದ್ದೆ, ಇವರುಗಳನ್ನು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಉದಯ ಕುಮಾರ್, ಅಂಪಾರೂ ಸಂಜಯ್, ಮಿತ್ರ ಸಂಗಮ ಹಾಗೂ ಗಿರೀಶ್ ಕೆ.ಎಸ್ ಉಪಸ್ಥಿತರಿದ್ದರು.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ  ಡಾ.ಎಸ್ ಬಾಲಾಜಿ ಅವರ ಮಾರ್ಗದರ್ಶನದಲ್ಲಿ ಈ ಸಮಾರಂಭ ಆಯೋಜಿ ಸಲಾಗಿತ್ತ ಪತ್ರಕರ್ತ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.

Leave a Reply