‘ಜನಪದ’ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ

ಭಾವನಾ ಫೌಂಡೇಶನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ ‘ಜನಪದ’ ದೇಶೀಯ ಕಲೆಗಳ ಎರಡು ಮತ್ತು ಮೂರನೆಯ ಸರಣಿ ಕಾರ್ಯಾಗಾರವು ಮಾರ್ಚ್, 31ರಿಂದ ಏಪ್ರಿಲ್ ೨ರ ತನಕ 10.03.3028 ಬಡಗುಪೇಟೆ (ಜೋಯ್ ಆಲುಕ್ಕಾಸ್ ಜ್ಯುವೆಲ್ಲರಿಯ ಹಿಂಭಾಗ)ಯಲ್ಲಿ ನಡೆಯಲಿಕ್ಕಿದೆ.ಹಾವಂಜೆಯoತಹ ಗ್ರಾಮೀಣ ಭಾಗದಲ್ಲಿ ಕಲೆಯ ಬಗೆಗಿನ ಆಸಕ್ತಿಯನ್ನು ಬೆಳೆಸುತ್ತಿರುವ ಭಾವನಾ ಕಲಾಶಾಲೆಯ ವಿಂಶತಿ ಸಂಭ್ರಮದ ಹೊಸ್ತಿಲಲ್ಲಿ ಈ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಭಾರತದ ತುಂಬೆಲ್ಲ ಹರಡಿಕೊಂಡಿರುವ ನಾನಾ ವಿಧದ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸು ವುದರ ಮೂಲಕ ಕಲಾಸಕ್ತರು ಅದನ್ನು ರಚಿಸುವಲ್ಲಿ ತೊಡಗಿಸಿಕೊಳ್ಳುವುದು ಮತ್ತು ಕಲಾಪ್ರದರ್ಶನ ಮತ್ತು ಮಾರಾಟಗಳಿಂದ ಅಳಿವಿನಂಚಿನಲ್ಲಿರುವ ದೇಶೀಯ ಕಲೆಗಳ ಪ್ರಚಾರ ಮತ್ತು ಪ್ರೋತ್ಸಾಹದ ಉದ್ದೇಶವಿಟ್ಟುಕೊಂಡು ಈ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಸರಣಿ ಕಾರ್ಯಾಗಾರವನ್ನು ವೆಂಟನಾ ಫೌಂಡೇಶನ್‌ನ ಟ್ರಸ್ಟಿಗಳಾದ ರವೀಂದ್ರ ಕೆ.ಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್ನ ಮುಖ್ಯಸ್ಥರಾದ ಪ್ರೊ. ವರದೇಶ ಹಿರೇಗಂಗೆ , ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕರಾದ ಆರ್ಕಿಟೆಕ್ಟ್ ಸುಭಾಶ್‌ಚಂದ್ರ ಬಸು ಹಾಗೂ ಭಾವನಾ ಪೌಂಡೇಶನ್‌ನ ನಿರ್ದೇಶಕರಾದ ಯಕ್ಷಗುರು ಹಾವಂಜೆ ಮಂಜುನಾಥಯ್ಯನವರು ಉಪಸ್ಥಿತರಿರುತ್ತಾರೆ.

ಮಾರ್ಚ್ 31 ಹಾಗೂ ಏಪ್ರಿಲ್ 1 ರಂದು ಸರಣಿಯ ಎರಡನೆಯ ಕಾರ್ಯಾಗಾರವಾಗಿ ಬಟ್ಟೆ, ಪೇಪರ್ ಮೊದಲಾದವುಗಳ ರಚಿಸಲ್ಪಡುವ ಪಟಚಿತ್ರ ಹಾಗೂ ಏಪ್ರಿಲ್ ೨ರಂದು ಮೂರನೆಯ ಕಾರ್ಯಾಗಾರದಲ್ಲಿ ತಾಳೆಯೋಲೆಯ ಮೇಲೆ ಗೀರಿ ರೇಖಿಸಲ್ಪಡುವ ತಾಳ ಪಟಚಿತ್ರ ಕಾರ್ಯಾಗಾರಗಳನ್ನು ರಾಷ್ಟ್ರ ಪ್ರಶಸ್ತಿಪುರಸ್ಕೃತರಾದ  ಒರಿಸ್ಸಾದ ಗೀತಾಂಜಲಿ ದಾಸ್‌ರವರು ನಡೆಸಿಕೊಡುತ್ತಾರೆ.

ಪಟಚಿತ್ರಗಳ ಪಾರಂಪರಿಕ ರಚನಾಕ್ರಮ, ತಾಂತ್ರಿಕತೆಗಳನ್ನೆಲ್ಲ ಕಾರ್ಯಾಗಾರದಲ್ಲಿ ಕಲಿಸಿಕೊಡುವ ವರಿದ್ದು, ಪ್ರತಿನಿತ್ಯ ಸಂಜೆ ೪ರಿಂದ ೭ರ ತನಕ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿಕ್ಕಿದೆ.

ಪ್ರತಿ ತಿಂಗಳಿಗೆ  ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದ್ದು, ವೆಂಟನಾ ಫೌಂಡೇಶನ್, ಮಣಿಪಾಲ ವಿಶ್ವವಿದ್ಯಾಲಯ, ಸಂಸ್ಕೃತಿ  ವಿಶ್ವ ಪ್ರತಿಷ್ಠಾನ, ಇಂಟ್ಯಾಕ್ ಮಂಗಳೂರು (ಉಡುಪಿ ಉಪವಿಭಾಗ), ಆರ್ಟಿಸ್ಟ್ ಫೋರಂ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮಗಳನ್ನು ಸಂಯೋಜಿಸಲಾಗುತ್ತಿದೆ.  ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ (೯೮೪೫೬೫೦೫೪೪)ಯವರನ್ನು ಸಂಪರ್ಕಿಸಲು ಕೋರಲಾಗಿದೆ.

 
 
 
 
 
 
 
 
 
 
 

Leave a Reply