ಗೋಮಾತೆಯ ಸಾನಿಧ್ಯದಲ್ಲಿ ಯಕ್ಷಗಾನ 

ಪೇಜಾವರ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನೀಲಾವರ ಗೋಶಾಲೆಯಲ್ಲಿ ನಡೆದ ಶ್ರೀ ಕೃಷ್ಣಜಯಂತೀ ಸಂಭ್ರಮಕ್ಕೆ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ವೈಭವದ ಮೆರುಗು ನೀಡುವಲ್ಲಿ ಯಶಸಸ್ವಿಯಾಯಿತು. ರಾಕೇಶ್ ರೈ ಅಡ್ಕ ಮತ್ತು ತಂಡದವರಿಂದ ನರಕಾಸುರ ಮೋಕ್ಷ ತೆಂಕುತಿಟ್ಟು ಯಕ್ಷ ಪ್ರಸಂಗ ಪ್ರದರ್ಶನಗೊಂಡು ಆನ್ ಲೈನ್ ಮೂಲಕ ಸಹಸ್ರಾರು ಕಲಾಭಿಮಾನಿಗಳನ್ನು ತಲುಪಿ ಮೆಚ್ಚುಗೆಗೆ ಪಾತ್ರವಾಗಿದೆ
ಕೃಪ್ಣನ ಪಾತ್ರದಲ್ಲಿ ರಾಕೇಶ್ ರೈ, ಸತ್ಯಭಾಮೆಯಾಗಿ ವಿಂಧ್ಯಾ ಆಚಾರ್ಯ, ನರಕಾಸುರನಾಗಿ ಡಾ. ಸುನೀಲ್ ಮುಂಡ್ಕೂರು, ಮುರಾಸುರ -ಸುಧನ್ವ, ಇಂದ್ರ – ಸುಮನ್ಯು ಭೂಮಿಕೆಯಲ್ಲಿ ಉತ್ತಮ‌ಪಾತ್ರ ನಿರ್ವಹಿಸಿದರು. ಹಿಮ್ಮೇಳದಲ್ಲಿ- ಭಾಗವತಿಕೆ: ಶಾಲಿನಿ ಹೆಬ್ಬಾರ್, ಚೆಂಡೆ :ಮುರಾರಿ ಕಡಂಬಳಿತ್ತಾಯ, ಮದ್ದಳೆ :ವರುಣ್ ಹೆಬ್ಬಾರ್, ಚಕ್ರತಾಳ :ಮಿಲನ್ ಪಣಂಬೂರು ಇವರೆಲ್ಲರೂ ಪ್ರಸಂಗದ ಯಶಸ್ಸಿಗೆ ಜೀವ ತುಂಬಿದರು. ಪ್ರದರ್ಶನ ವೀಕ್ಷಿಸಿದ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿ ಕಲಾವಿದರನ್ನು ಅಭಿನಂದಿಸಿದರು.

Leave a Reply