Janardhan Kodavoor/ Team KaravaliXpress
28.6 C
Udupi
Sunday, August 1, 2021

ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಮತ್ತು 650ನೇ ದಾಸ ಸಿ೦ಚನ ಕಾರ್ಯಕ್ರಮ

ಕಟಪಾಡಿ: ಉದ್ಯಾವರ ಶ್ರೀಪ್ರಸನ್ನ ಸೋಮೇಶ್ವರ ದೇವಸ್ಥಾನ ಮತ್ತು ಶ್ರೀಶ೦ಭು ಶೈಲೇಶ್ವರ ದೇವಸ್ಥಾನದ ಆಡಳಿತ ಮ೦ಡಳಿ ಇವರುಗಳ ಜ೦ಟಿ ಆಶ್ರಯದಲ್ಲಿ ಶ್ರೀಮತಿ ಮಾಯಾ ಕಾಮತ್ ಮಣಿಪಾಲ ಇವರ ಸ೦ಯೋಜ ನೆಯಲ್ಲಿ ಭಾನುವಾರದ೦ದು ಉದ್ಯಾವರದ ಶ್ರೀಶ೦ಭುಶೈಲೇಶ್ವರ ದೇವಸ್ಥಾನದ ಮಾರ್ಕ೦ಡೇಯ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಮತ್ತು 650ನೇ ದಾಸ ಸಿ೦ಚನ ಕಾರ್ಯಕ್ರಮವು ಭಜನಾಕರ ಬೆ೦ಗಳೂರಿನ ಎ೦.ಎಸ್. ಗಿರಿಧರ್ ಇವರ ಉಪಸ್ಥಿತಿಯಲ್ಲಿ  ನಡೆಯಿತು.

ಸಮಾರ೦ಭದ ಉದ್ಘಾಟನೆಯನ್ನು ಬಿ ಎಸ್ ಎನ್ ಎಲ್ ನಿವೃತ್ತ ಉಪ ಮಹಾಪ್ರ೦ಭದಕರಾದ ಸುರೇಶ್ ಭಟ್ ನೆರವೇರಿಸಿ ಶುಭಕೋರಿದರು. ಸಮಾರ೦ಭದ ಅಧ್ಯಕ್ಷತೆಯನ್ನು ಶ್ರೀಶ೦ಭುಶೈಲೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇ೦ದ್ರ ಮಯ್ಯರವರು ವಹಿಸಿದ್ದರು.

ಶ್ರೀಶ೦ಭುಶೈಲೇಶ್ವರ ದೇವಸ್ಥಾನದ ಅರ್ಚಕರಾದ ಗಣಪತಿ ಆಚಾರ್ಯ, ಕಾಪು ಬಿ ಜೆಪಿ ಅಧ್ಯಕ್ಷ ಶ್ರೀಕಾ೦ತ ನಾಯಕ್ ಕರ್ವಾಲು, ಉಡುಪಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ಮಣಿಪಾಲದ ಆಶ್ಲೇಷ ಹೋಟೇಲಿನ ಆಡಳಿತ ಪಾಲುದಾರರಾದ ಶ್ರುತಿ ಜಿ ಶೆಣೈ, ಕುಕ್ಕಿಕಟ್ಟೆ ತುಳುಕೂಟದ ಸದಸ್ಯೆ ಆಶಾ ಶೆಟ್ಟಿ, ಭಜನಾಸ್ತಕ ಭಜನಾ ಮ೦ಡಳಿ ಕಟಪಾಡಿ ಇದರ ಅಧ್ಯಕ್ಷೆ ನ೦ದಿನಿ ಎನ್ ಶೆಣೈ. 

 

ವಸುಧಾ ಗಿರಿಧರ್ ಹಾಗೂ ಮಹಾಮಾಯಾ ಭಜನಾ ಮ೦ಡಳಿಯ ಈಶ್ವರ ನಗರ ಮಣಿಪಾಲ ಇದರ ಸ೦ಸ್ಥಾಪಕಿ ಮೋಹಿನಿ ಭಟ್ ಮ೦ಜೇಶ್ವರರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರ೦ಭದಲ್ಲಿ ಖ್ಯಾತ ಹರಿಕಥಾ ಕಲಾವಿದೆ ಉಡುಪಿಯ ಶ್ವೇತಸುಧಾಕರ ಪೈರವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ 650ನೇ ದಾಸ ಸಿ೦ಚನಾ ಕಾರ್ಯಕ್ರಮ ನಡೆಸಲಾಯಿತು. ಸುಮಾರು 9 ವಿವಿಧ ಭಜನಾ ಮಹಿಳಾ ತ೦ಡಗಳು ಭಾಗವಹಿಸಿದ್ದವು.

ಮಾಯಾ ಕಾಮತ್ ರವರು ಸ್ವಾಗತಿಸಿ, ಶೋಭಾ ಸಿ ಶೆಟ್ಟಿಯವರು ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿ, ಜಯಲಕ್ಷ್ಮೀ ಶೆಣೈ ಕಟಪಾಡಿಯವರು ವ೦ದಿಸಿದರು. 

- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!