ಯಕ್ಷಗಾನವನ್ನು ಸುವರ್ಣ ಯುಗಕ್ಕೆ ಕೊಂಡೊಯ್ಯಲು ಬಾ.ಸಾಮಗ ಕರೆ

ಕರ್ನಾಟಕದ ಅಗ್ರಗಣ್ಯ ಜಾನಪದ ಕಲೆಯಾಗಿರುವ ಕರಾವಳಿ ಯಕ್ಷಗಾನ ಕಳೆದ ಶತಮಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿ ಈ ಶತಮಾನದಲ್ಲಿ ಮತ್ತಷ್ಟು ಮಾರ್ಪಾಡುಗಳಿಂದ ವೈಭವಯುತವಾಗಿ ಮುನ್ನಡೆಯುತ್ತಿರುವುದರಿಂದ ಯಕ್ಷಗಾನವನ್ನು ಸಹಜವಾಗಿಸುವರ್ಣ ಯುಗಕ್ಕೆ ಕೊಂಡೊಯ್ದು ವಿಶ್ವದ ಅಗ್ರಗಣ್ಯ ಕಲೆಯಾಗಿಸಬೇಕೆಂದು ದೆಹಲಿ ಕನ್ನಡಿಗ, ತುಳುವೆರ್ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಅವರು ಕರೆ ನೀಡಿದರು.
ಅವರು ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘ ಉಡುಪಿ ಬೆಳ್ಕಳೆಯಲ್ಲಿ ಏರ್ಪಡಿಸಿದ್ದ  ೪೩ನೇ
ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸಮಾಜದ ಎಲ್ಲಾ ಜಾತಿ, ವರ್ಗಗಳ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಯಕ್ಷಗಾನದಲ್ಲಿ ಭಾಗವಹಿ ಸುವುದು ಗೌರವವೆಂದು ತಿಳಿದಿರುವ ಈ ಕಾಲದಲ್ಲಿ, ೮೦ಕ್ಕೂ ಹೆಚ್ಚು ಯಕ್ಷಗಾನ ಮೇಳಗಳು, ತಂಡಗಳು, ಸಂಘ-ಸಂಸ್ಥೆಗಳು, ಸಾವಿರಕ್ಕೂ ಮೀರಿ ಯಕ್ಷಗಾನ-ಪ್ರಸಂಗ ಪ್ರದರ್ಶಿಸಿ ಲಕ್ಷಾಂತರ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವುದು ಶುಭ ಸೂಚನೆ ಎಂದ ಸಾಮಗ ಅವರು ಹರಕೆ ಆಟ ಆಡಿಸು ವವರ ಬೇಡಿಕೆ ತುಂಬಾ ಹೆಚ್ಚಾಗಿದೆಯಲ್ಲದೆ ಕಲಾವಿದರ ಆರ್ಥಿಕ  ಬದುಕು ಭದ್ರವಾಗುತ್ತಿರುವುದು ಯಕ್ಷಗಾನ ಮುಂದಿನ ಜನಾಂಗಕ್ಕೂ ವರ್ಗಾವಣೆಯಾಗಲು ಉತ್ತೇಜಿಸಿದೆಯೆಂದರು. 
ಯಕ್ಷಗಾನ ಪ್ರಗತಿ ಗೊಳಿಸಲು ಸರಕಾರವು ದಿಲ್ಲಿ, ಬೆಂಗಳೂರಲ್ಲಿ ಯಕ್ಷಗಾನ ಸಂಸ್ಕೃತಿ ಸಂಗ್ರ ಹಾಲಯ ಸ್ಥಾಪಿಸಿ ವಿಶ್ವದ ಮುಖ್ಯ ನಗರಗಳಲ್ಲಿ ಯಕ್ಷಗಾನ ಉತ್ಸವ ನಡೆಸಬೇಕೆಂದು ಆಗ್ರಹಿಸಿದ ಸಾಮಗ ಅವರು ದೂರದರ್ಶನದಲ್ಲಿ  ಪ್ರತ್ಯೇಕ ಚಾನೆಲ್ ಆರಂಭಿಸಿ, ಯಕ್ಷಗಾನ ಡೇರೆ ಮೇಳ ಗಳಿಗೆ ಸಬ್ಸಿಡಿ ನೀಡಬೇಕೆಂದರೆಲ್ಲದೆ ಕನ್ನಡದೊಂದಿಗೆ ಬೇರೆ ಮುಖ್ಯ ಭಾಷೆಗಳನ್ನು ಬಳಸಿಕೊಂಡು ಇತಿಮಿತಿಯಲ್ಲಿ ಕಲೆಗೆ ಸುಧಾರಣೆ ತರುವುದು ಅವಶ್ಯಕವೆಂದರು.
ಸಂಘದ ಅಧ್ಯಕ್ಷ ಸುಧಾಕರ ಜತ್ತನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ  ಗೋಪಾಲ ಭಟ್ ಕಾರ‍್ಯಕ್ರಮ ಉದ್ಘಾಟಿಸಿದರು. ಸುಪ್ರಸಿದ್ಧ ವೇಷದಾರಿ ಗೋಪಾಲ ಗಾಣಿಗ ಅಜ್ರಿ ಅವರನ್ನು ಸನ್ಮಾನಿಸಲಾಯಿತು. ಗುರುವಂದನಾ ಕಾರ‍್ಯಕ್ರಮದಲ್ಲಿ ರತ್ನಾಕರ ಆಚಾರ್ಯ ಅವರನ್ನು ಗೌರವಿಸ ಲಾಯಿತು. ಗೌರವಾಧ್ಯಕ್ಷ ಕೆ.ಟಿ. ಪೂಜಾರಿ, ಗ್ರಾಮ ಕರಣಿಕ ದಿವಾಕರ್, ವೇಷದಾರಿ ಸುರೇಶ್ ಉಗ್ಗೆಲ್ ಬೆಟ್ಟು, ಧಾರ‍್ಮಿಕ ಮುಂದಾಳು ಐತು ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪೋಷಕ ಪಿ.ನ್. ಲಕ್ಷ್ಮಣ ಹಂದೆ ಕಾ ರ‍್ಯಕ್ರಮ ನಿರ್ವಹಿಸಿದರು. ನಂತರ ಸಂಘದ ಬಾಲಕಲಾವಿದರಿಂದ ಯೋಗಿನಿ ಕಲ್ಯಾಣ ಪ್ರಸಂಗದ ಪ್ರದರ್ಶನ ನಡೆಯಿತು. 
 
 
 
 
 
 
 
 
 
 
 

Leave a Reply