ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ನಮ್ಮ ಕೊಡವೂರ ಕಲಾ ಪ್ರತಿಭೆ ವಿಘ್ನೇಶ್ ಗಾಣಿಗ

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸತತ ಪರಿಶ್ರಮ, ನಿಖರ ಗುರಿ ಇದ್ದಲ್ಲಿ ಎಲ್ಲವೂ ಸಾಧ್ಯವೆಂದು ತೋರಿಸಿದ ಅಸಾಧಾರಣ ಪ್ರತಿಭೆ..
ಕಲ್ಯಾಣಪುರ ಮೌಂಟ್ ರೋಸರಿ ಪ್ರೌಢ ಶಾಲೆಯ ಹತ್ತನೆ ತರಗತಿಯಲ್ಲಿ ಓದುತ್ತಿರುವ ವಿಘ್ನೇಶ್,  ಪ್ರೌಢಶಾಲಾ ವಿಭಾಗದ ದೃಶ್ಯಕಲಾ ವಿಭಾಗದ ಕಲೋತ್ಸವ 2020 ರಲ್ಲಿ ಭಾಗಿಯಾಗಿ ಹಂತ ಹಂತವಾಗಿ ಮೇಲೇರುತ್ತಾ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ,  ರಾಷ್ಟಮಟ್ಟದ ಕಲೋತ್ಸವದಲ್ಲಿ ಭಾಗಿಯಾಗಿದ್ದಾನೆ. 
 
ಕೊಡವೂರು ಲಕ್ಷೀನಗರದ ಅಂಚೆ ಇಲಾಖಾ ಉದ್ಯೋಗಿ ರಾಘವೇಂದ್ರ ಹಾಗೂ ಪೂರ್ಣಿಮ ದಂಪತಿಗಳ ಪ್ರಥಮ ಪುತ್ರ ವಿಘ್ನೇಶ್. ಬಾಲ್ಯದಲ್ಲಿ ಉದ್ಯಾವರದ ಅಜ್ಜಿ ಮನೆಯ ಪಕ್ಕದಲ್ಲಿ ಹಿರಿಯರೋರ್ವರು ನಿರ್ಮಿಸಿದ ಅವೆ ಮಣ್ಣಿನ ಕಲಾ ಕೃತಿಯನ್ನು ಕಂಡು ತಾನು ಕೂಡ ಪ್ರಯತ್ನಿಸ ಬೇಕೆಂದು ಕೊಂಡು ಮನೆಯ ಪಕ್ಕದಲ್ಲಿರುವ ಮಣ್ಣನ್ನು ಶಿಲ್ಪವನ್ನಾಗಿಸಲು ಯತ್ನಿಸಿದ.
ಇವನಲ್ಲಿರುವ ಆಸಕ್ತಿಯನ್ನು ಕಂಡ ತಂದೆ ತಾಯಿ ನೀರೆರೆದು ಪೋಷಿಸುವ  ಕೆಲಸವನ್ನು ಮಾಡಿದರು. ಅಧ್ಯಾಪಕರುಗಳ ಮಾರ್ಗದರ್ಶನದೊಂದಿಗೆ ಉತ್ತಮ ಸಾಧನೆ ಮಾಡಿದ ವಿಘ್ನೇಶ್ ಗಾಣಿಗ. 
 
 
 
 
 
 
 
 
 
 
 

Leave a Reply