“ಯಕ್ಷಗಾನದ ಅಂತರಂಗ-ಬಹಿರಂಗ” ಬಿಡುಗಡೆ

ಉಚ್ಚಿಲ: ಯಕ್ಷಗಾನ ಗುರು, ನಿವೃತ್ತ ಶಿಕ್ಷಕ ಎರ್ಮಾಳು ವಾಸುದೇವ ರಾಯರು ಉಚ್ಚಿಲದ ಹೋಟೆಲ್ ರಾಧಾದ ‘ರಾಧಾ ಸಭಾಭವನ:ದಲ್ಲಿ ಕೆ.ಎಲ್. ಕುಂಡಂತಾಯರ “ಯಕ್ಷಗಾನದ ಅಂತರಂಗ- ಬಹಿರಂಗ” ಪುಸ್ತಕವನ್ನು ಬಿಡುಗಡೆ ಗೊಳಿಸಿ ಶುಭಹಾರೈಸಿದರು. 

‘ನಿರಂತರ ಅಭ್ಯಾಸ, ಅಧ್ಯಯನ, ಓದು, ಸಾಧನೆ’ ಇವು ಯಕ್ಷಗಾನ ಕಲಾವಿದನಾಗ ಬೇಕಾದವರಿಗೆ ಅಗತ್ಯ ಎಂದು ವಾಸುದೇವರಾಯರು ಅಭಿಪ್ರಾಯಪಟ್ಟರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ .ಎಸ್. ಅವರು ವಹಿಸಿದ್ದರು .

ಎಲ್ಲೂರುಗುತ್ತು ವೈ.ಪ್ರಫುಲ್ಲ ಶೆಟ್ಟಿ , ಪುಣೆ ಉದ್ಯಮಿ ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ, ಅದಮಾರು ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ. ಶೆಟ್ಟಿ‌, ಎಲ್ಲೂರಿನ ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಸಂಸ್ಥಾಪಕ ಶ್ರೀನಿವಾಸ ಉಪಾಧ್ಯಾಯ, ಕುಂಜೂರಿನ ಕೃಷಿಕ ಗುರುರಾಜ ಮಂಜಿತ್ತಾಯ ಉಪಸ್ಥಿತರಿದ್ದರು. 

ಗಣೇಶ ರಾವ್ ಎಲ್ಲೂರು ಸ್ವಾಗತಿಸಿ, ಪುಸ್ತಕ ಪರಿಚಯಿಸಿದರು, ನಾಗರಾಜ ಉಡುಪ ವಂದಿಸಿದರು. ಗಣೇಶ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹಾ ಎಸ್.ಕೆ. ಮತ್ತು ಸನ್ನಿಧಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಗುರು ಎರ್ಮಾಳು ವಾಸುದೇವರಾಯರಿಗೆ ಗುರು ವಂದನೆ ಸಮರ್ಪಿಸಲಾಯಿತು. ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರನ್ನು ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply