ಮಲ್ಪೆಯಲ್ಲಿ ಗಮನ ಸೆಳೆಯುವ ಪುರುಷೋತ್ತಮ ಅಡ್ವೆ ಕಲಾಕೃತಿ 

ಮಲ್ಪೆ ಸೀ ವಾಕ್ ವೇ ಸಮೀಪ ಬೀಚ್ ಅಭಿವೃದ್ಧಿ ಸಮಿತಿ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಪಾತಿ  ದೋಣಿ ಮೀನುಗಾರಿಕೆ, ಜಟಾಯು ಮೊದಲಾದ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
 
ಜಟಾಯು ಪ್ರತಿಮೆಸಿಮೆಂಟ್‌ನಲ್ಲಿ ತಯಾರಿಸಿದ ಸುಮಾರು 15 ಅಡಿ ಎತ್ತರದ ಜಟಾಯು ಪ್ರತಿಮೆ ಹಾಗೂ ಪಾತಿ ದೋಣಿಯಲ್ಲಿ ಬೆಸ್ತ ಮೀನುಗಾರಿಕೆ ಮಾಡುವ ಕಲಾಕೃತಿಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.  ವಿವಿಧ ಜಾನಪದ ಮತ್ತು ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಸ್ಯಾಂಡ್ ಆರ್ಟ್‌ಗಳು ನಿರ್ಮಾಣವಾಗುತ್ತಿವೆ. ಮಲ್ಪೆಗೆ ಆಗಮಿಸುವ ಪ್ರವಾಸಿಗರಿಗೆ ಸ್ಥಳೀಯ ಜಾನಪದ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಲಾಕೃತಿಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಸೆಲ್ಫಿ ರೆನ್‌ಗಳನ್ನು ನಿರ್ಮಿಸ​ ​ಲಾಗುವುದು.

ಟೆಗ್ಮಾ ಶಿಪ್ ಯಾರ್ಡ್ ಮುಂಭಾಗದಿಂದ ಸೀ ವಾಕ್ ವೇ ವರೆಗಿನ ಸುಮಾರು 500 ಮೀ ಖಾಲಿ ಜಾಗದಲ್ಲಿ 50 ಸಾವಿರ ಚದರಡಿಯ ವಾಹನ ಪಾರ್ಕಿಂಗ್ ಪ್ರದೇಶ, 250 ಆಸನದ ಆ್ಯಂಪಿ ಥಿಯೇಟರ್, ಮಕ್ಕಳ ಆಟಕ್ಕೆ ಸ್ಯಾಂಡ್ ಪಿಟ್, ಜಾರು ಬಂಡಿ, 8 ಅಂಗಡಿಗಳನ್ನು ನಿರ್ಮಿಸಲಾಗುತ್ತಿದೆ. ಉಡುಪಿ ನಿರ್ಮಿತಿ ಕೇಂದ್ರ ಕಾಮಗಾರಿ ಉಸ್ತು ವಾರಿ ವಹಿಸಿದ್ದು, ನವೆಂಬರ್ ವೇಳೆಗೆ ಮಲ್ಪೆ ಬೀಚ್ ಮತ್ತಷ್ಟು ಆಕರ್ಷಣೀಯವಾಗಿ ಪ್ರವಾಸಿಗರಿಗೆ ತೆರೆದು ಕೊಳ್ಳಲಿದೆ.
 
 
 
 
 
 
 
 
 

Leave a Reply