Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ಸಂಸ್ಕೃತ ತಾಳಮದ್ದಳೆಗೆ ರಾಜಾಂಗಣ ಸಜ್ಜು

ಉಡುಪಿ: ಸಂಸ್ಕೃತ ಮಾಸ ಅಂಗವಾಗಿ ಪರ್ಯಾಯ ಅದಮಾರು ಶ್ರೀಕೃಷ್ಣಮಠ ಹಾಗೂ ಕೊಚ್ಚಿನ್ ಚಿನ್ಮಯ ವಿಶ್ವವಿದ್ಯಾಪೀಠಮ್ ಆಶ್ರಯದಲ್ಲಿ ಆ. 11ರಂದು ರಾತ್ರಿ 7ರಿಂದ 9.30ರ ವರೆಗೆ ಕೃಷ್ಣಮಠ ರಾಜಾಂಗಣದಲ್ಲಿ ಸಂಸ್ಕೃತ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕಾರ್ಯಕ್ರಮ ಆನ್ ಲೈನ್ ಮೂಲಕ ಪ್ರಚಾರಗೊಳ್ಳಲಿದೆ.
ಕವಿ ಪಾರ್ತಿಸುಬ್ಬ ವಿರಚಿತ `ಭರತಾಗಮನ’ ಆಖ್ಯಾನ ಪ್ರಸ್ತುತಪಡಿಸಲಾಗುವುದು. ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಚಿನ್ಮಯ ವಿಶ್ವವಿದ್ಯಾಪೀಠಮ್ ಕುಲಪತಿ ಪ್ರೊ. ನಾಗರಾಜ ನೀರ್ಚಾಲು ಶುಭಾಶಂಸನೆಗೈಯ್ಯಲಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಯಲ್ಲಾಪುರ, ಮದ್ದಳೆ ವಾದಕರಾಗಿ ನಾರಾಯಣ ಜಿ. ಹೆಗಡೆ ಯಲ್ಲಾಪುರ ಭಾಗವಹಿಸುವರು.
ಅರ್ಥದಾರಿಗಳಾಗಿ ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್ಟ ಕೆರೇಕೈ (ಶ್ರೀರಾಮ), ಡಾ. ರಾಮಕೃಷ್ಣ ಪೆಜತ್ತಾಯ ಎರ್ನಾಕುಲಮ್ (ಭರತ), ಡಾ. ಅಮೃತೇಶ ಆಚಾರ್ಯ ಉಡುಪಿ (ಲಕ್ಷ್ಮಣ) ಮತ್ತು ವಿದ್ವಾನ್ ಕೃಷ್ಣರಾಜ ಕುತ್ಪಾಡಿ (ಸೀತೆ) ಭಾಗವಹಿಸುವರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!