ಬಲಿಷ್ಠ, ಸಮೃದ್ಧ, ಸೌಹಾರ್ದಯುತ ರಾಷ್ಟ್ರ ನಿರ್ಮಾಣಕ್ಕೆ ರಾಮ ಮಂದಿರ ಮುನ್ನುಡಿ- ಎಲ್.ಕೆ.ಅಡ್ವಾಣಿ

ನವದೆಹಲಿ: ನಮ್ಮ ದೇಶದ ಶ್ರೀಮಂತ ಇತಿಹಾಸದಲ್ಲಿ ಶ್ರೀರಾಮನಿಗೆ ಪವಿತ್ರವಾದ ಸ್ಥಾನವಿದೆ ಎಂದು ಬಿಜೆಪಿ ಹಿರಿಯ ನೇತಾರ ಲಾಲ್ ಕೃಷ್ಣ ಆಡ್ವಾಣಿಯವರು ಇಂದು ಹೇಳಿದರು. ರಾಮ ಮಂದಿರವು ಭಾರತವನ್ನು ಬಲಿಷ್ಠ, ಸಮೃದ್ಧ ಮತ್ತು ಸೌಹಾರ್ದಯುತ ರಾಷ್ಟ್ರವನ್ನಾಗಿಸಲಿದೆ. ಎಲ್ಲರಿಗೂ ನ್ಯಾಯ ಮತ್ತು ಒಳಗೊಳ್ಳುವಿಕೆಯ ಮೂಲಕ ರಾಮ ರಾಜ್ಯದ ಕನಸನ್ನು ನನಸಾಗಿಸಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರಾಮ ಜನ್ಮಭೂಮಿ ಚಳವಳಿ ಸಂದರ್ಭದಲ್ಲಿ 1990 ರಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗೆ ನಡೆಸಿದ ರಥಯಾತ್ರೆಯನ್ನು ಎಲ್.ಕೆ. ಅಡ್ವಾಣಿಯವರು ನೆನಪಿಸಿಕೊಂಡು ಚಳವಳಿಗೆ ಇಂಧನ ಒದಗಿಸುವಲ್ಲಿ ರಥಯಾತ್ರೆಯ ಕೊಡುಗೆ ಬಹಳಷ್ಟಿತ್ತು ಮತ್ತು ಇದು ನನ್ನಿಂದ ದೇವರು ಮಾಡಿಸಿಕೊಂಡರು ಎಂದು ಭಾವನಾತ್ಮಕವಾಗಿ ಹೇಳಿದರು.

Leave a Reply