Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಜನ ಸೇವೆಯ ಜೊತೆಗೆ ಸ್ವಯಂ ಕಾಳಜಿ ಅಗತ್ಯ: ಡಾ. ನಿ.ಬಿ ವಿಜಯ ಬಲ್ಲಾಳ್

ಉಡುಪಿ: ಕೋವಿಡ್ ವಾರಿಯರ್ಸ್ ಹಾಗೂ ಕೋವಿಡ್-19 ಹೆಲ್ಪ್ ಡೆಸ್ಕ್ ಸೇವಾ ನಿರತ ಕಾರ್ಯಕರ್ತರು ಜನ ಸೇವೆಯ ಜೊತೆಗೆ ಸ್ವಯಂ ಅರೋಗ್ಯ ಪಾಲನೆಯ ಕಾಳಜಿಯನ್ನೂ ವಹಿಸುವುದು ಅತೀ ಅಗತ್ಯ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಸ್ವಯಂ ಜಾಗ್ರತಿಯೇ ಕೋವಿಡ್ ಸೋಂಕನ್ನು ತಡೆಗಟ್ಟುವ ಸುಲಭ ವಿಧಾನ.ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ, ಸ್ವಚ್ಛತೆಗೆ ಆದ್ಯತೆ ನೀಡಿ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಅಶಕ್ತರಿಗೆ ಸಹಾಯ ಮಾಡುವುದು ಇಂದಿನ ಅಗತ್ಯತೆ ಎಂದರು.

ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ನೇತೃತ್ವದಲ್ಲಿ ಉಡುಪಿ ನಗರ ಆರಕ್ಷಕ ಠಾಣೆಯ ಮಾರ್ಗದರ್ಶನದಲ್ಲಿ ಯುವಕ ಮಂಡಲ (ರಿ.) ಅಂಬಲಪಾಡಿ ಮತ್ತು ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಯುವಕ ಮಂಡಲದ ಕಛೇರಿಯಲ್ಲಿ ಕಾರ್ಯಾಚರಿಸುತ್ತಿರುವ ಕೋವಿಡ್-19 ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಪರಿಕರಗಳನ್ನು ಹಸ್ತಾಂತರಿಸಿ, ದಾನಿಗಳ ನೆರವಿನ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.

ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ,ಕಳೆದ ವರ್ಷವೂ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ, ಅಶಕ್ತರಿಗೆ ಟ್ರಸ್ಟ್ ಮೂಲಕ ಗರಿಷ್ಠ ಸಹಾಯವನ್ನು ನೀಡಿದ್ದು, ಈ ಬಾರಿಯೂ ಅಗತ್ಯ ಫಲಾನುಭವಿಗಳನ್ನು ಗುರುತಿಸಿದಲ್ಲಿ ಟ್ರಸ್ಟ್ ಮೂಲಕ ಆಹಾರ ಧಾನ್ಯ ಕಿಟ್ ವಿತರಿಸಲು ಬದ್ಧ. ಕೋವಿಡ್-19 ಹೆಲ್ಪ್ ಡೆಸ್ಕ್ ಅಂಬಲಪಾಡಿ ಇದರ ಮಾದರಿ ಸೇವಾ ಕಾರ್ಯ ಪ್ರಶಂಸನೀಯ ಎಂದರು.

ಅಂಬಲಪಾಡಿ ದೇವಸ್ಥಾನ ಹಾಗೂ ಕೆ.ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೋವಿಡ್-19 ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ನೀಡಿದ ಪಲ್ಸ್ ಆಕ್ಸಿ ಮೀಟರ್, ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್, ಗ್ಲೋವ್ಸ್, ಫೇಸ್ ಶೀಲ್ಡ್, ಫ್ಲೋರ್ ಸ್ಯಾನಿಟೈಸರ್ ಇತ್ಯಾದಿ ಕೋವಿಡ್ ಮುಂಜಾಗ್ರತಾ ಸಂಬಂಧಿತ ಪರಿಕರಗಳನ್ನು ಹಸ್ತಾಂತರಿಸಲಾಯಿತು.ರಾಜೇಂದ್ರ ಪಂದುಬೆಟ್ಟು, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ವತಿಯ ಪಲ್ಸ್ ಅಕ್ಸೀ ಮೀಟರ್,ಅಂಡಾರು ದೇವಿಪ್ರಸಾದ್ ಶೆಟ್ಟಿ ವತಿಯ ಮಾಸ್ಕ್, ಪ್ರಶಾಂತ್ ಅಂಬಲಪಾಡಿ ವತಿಯ ಸ್ಯಾನಿಟೈಸಿಂಗ್ ಕಿಟ್, ಜತ್ತನ್ ಪದ್ಮನಾಭ ಅಣ್ಣು ಮತ್ತು ಹೆಲ್ಪ್ ಲೈನ್ ಉಡುಪಿ ಇವರ ವತಿಯ ಆಹಾರ ಧಾನ್ಯಗಳ ಕಿಟ್ ಕೊಡುಗೆಗಳನ್ನು ಸ್ವೀಕರಿಸಲಾಯಿತು.

ಉಡುಪಿ ನಗರ ಆರಕ್ಷಕ ಠಾಣೆಯ ಉಪ ನಿರೀಕ್ಷಕ ವಾಸಪ್ಪ ನಾಯ್ಕ್ ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ಭೇಟಿ ನೀಡಿದರು.ಯುವಕ ಮಂಡಲ (ರಿ.) ಅಂಬಲಪಾಡಿ ಅಧ್ಯಕ್ಷ ಹರೀಶ್ ಪಾಲನ್, ಉಡುಪಿ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಸಾಮಾಜಿಕ ಮುಖಂಡ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಉಡುಪಿ ನಗರ ಆರಕ್ಷಕ ಠಾಣೆಯ ಸಿಬ್ಬಂದಿಗಳಾದ ಮಹಾಲಿಂಗ ಪಾತ್ರೋಟ್, ಚೇತನ್ ಎಸ್., ಕೋವಿಡ್-19 ಹೆಲ್ಪ್ ಡೆಸ್ಕ್ ತಂಡದ ಸೇವಾ ಪ್ರಮುಖರಾದ ಕೀರ್ತಿ ಶೆಟ್ಟಿ, ಯೋಗೀಶ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ವಾಮನ್ ಪಾಲನ್, ರಾಜೇಂದ್ರ ಪಂದುಬೆಟ್ಟು, ಹರೀಶ್ ಆಚಾರ್ಯ, ಅಜಿತ್ ಕಪ್ಪೆಟ್ಟು, ಪ್ರಶಾಂತ್ ಕೆ.ಎಸ್., ಕೃಷ್ಣ ಅಂಬಲಪಾಡಿ, ಜಗದೀಶ್ ಆಚಾರ್ಯ, ಪ್ರವೀಣ್ ಉಪಾಧ್ಯಾಯ, ಭರತ್ ರಾಜ್ ಕೆ.ಎನ್., ರಾಜೇಶ್ ಸುವರ್ಣ, ಲಕ್ಷ್ಮಣ ಪೂಜಾರಿ, ಗಣೀಶ್ ಶೆಣೈ, ಹರೀಶ್, ನಿಶಾಂತ್, ಮೇಘ, ಮಹೇಂದ್ರ ಕೋಟ್ಯಾನ್, ವಿನೋದ್ ಪೂಜಾರಿ, ಸುನಿಲ್ ಕುಮಾರ್, ಶ್ರೀಧರ, ಸುಜಿತ್ ಕಪ್ಪೆಟ್ಟು, ಸತೀಶ್ ಭಂಡಾರಿ, ರಾಮರಾಜ್ ಕಿದಿಯೂರು, ಗಿರೀಶ್ ಅಮೀನ್ ಕಿದಿಯೂರು, ಸುಂದರ ಪೂಜಾರಿ, ಶಶಿಧರ್ ಸುವರ್ಣ, ನವೀನ್ ಕಿದಿಯೂರು, ಆಶಾ ಕಾರ್ಯಕರ್ತೆಯರಾದ ಸರಸ್ವತಿ ಕೆ. ಶ್ರೀಯಾನ್, ಗಾಯತ್ರಿ, ನಿಶಾ ಮುಂತಾದವರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!